October 15, 2026
Thursday, October 15, 2026
spot_img

ಹಾರ್ಮುಜ್ ದಾಟಿದ ಭಾರತದ 2 LPG ಹಡಗು: ದಾಳಿಯಿಂದ ಮುಳುಗಿತು ಮತ್ತೊಂದು ಟ್ಯಾಂಕರ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಯುದ್ಧ ಭೀತಿಯ ನಡುವೆಯೂ ಭಾರತಕ್ಕೆ ಇಂಧನ ಪೂರೈಕೆ ನಿರಂತರವಾಗಿ ಸಾಗುತ್ತಿದೆ. ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮುಂದುವರಿದಿದ್ದರೂ, ಭಾರತಕ್ಕೆ ಬರುತ್ತಿದ್ದ ಎರಡು ಎಲ್‌ಪಿಜಿ ಹಡಗುಗಳು ಸುರಕ್ಷಿತವಾಗಿ ಮಾರ್ಗ ದಾಟಿವೆ.

ಇದೇ ವೇಳೆ ಭಾರತೀಯ ಧ್ವಜ ಹೊಂದಿದ್ದ ಮತ್ತೊಂದು ಸರಕು ಹಡಗು ಸಮುದ್ರದಲ್ಲಿ ದುರಂತಕ್ಕೀಡಾಗಿರುವ ಘಟನೆ ಆತಂಕ ಹೆಚ್ಚಿಸಿದೆ.

ಎಲ್‌ಪಿಜಿ ಟ್ಯಾಂಕರ್ ‘ಸಿಮಿ’ ಮೇ 13ರಂದು ಹಾರ್ಮುಜ್ ಜಲಸಂಧಿ ದಾಟಿದ್ದು, ‘ಎನ್‌ವಿ ಸನ್‌ಶೈನ್’ ಹಡಗು ಗುರುವಾರ ಯಾವುದೇ ಅಡಚಣೆ ಇಲ್ಲದೆ ತನ್ನ ಪ್ರಯಾಣ ಮುಂದುವರಿಸಿದೆ. ಇರಾನ್–ಅಮೆರಿಕ ಉದ್ವಿಗ್ನತೆ ಹೆಚ್ಚಾದ ಬಳಿಕವೂ ಭಾರತೀಯ ಹಡಗುಗಳ ಸಂಚಾರ ಮುಂದುವರಿದಿರುವುದು ಕೇಂದ್ರಕ್ಕೆ ಸ್ವಲ್ಪ ನೆಮ್ಮದಿ ತಂದಿದೆ.

ಇದನ್ನೂ ಓದಿ:

ಇನ್ನೊಂದೆಡೆ, ಸೊಮಾಲಿಯಾದಿಂದ ಯುಎಇಯ ಶಾರ್ಜಾಗೆ ತೆರಳುತ್ತಿದ್ದ ಭಾರತೀಯ ಯಾಂತ್ರಿಕ ಹಡಗು ‘ಹಾಜಿ ಅಲಿ’ ಒಮಾನಿ ಸಮುದ್ರ ಪ್ರದೇಶದಲ್ಲಿ ದಾಳಿಗೆ ಒಳಗಾಗಿದೆ. ದಾಳಿಯ ಬಳಿಕ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡು ಅದು ಸಮುದ್ರದಲ್ಲಿ ಮುಳುಗಿದೆ.

ಹಡಗಿನಲ್ಲಿ ಇದ್ದ 14 ಸಿಬ್ಬಂದಿಯನ್ನು ಒಮಾನ್ ಕರಾವಳಿ ಕಾವಲು ಪಡೆ ಸುರಕ್ಷಿತವಾಗಿ ರಕ್ಷಿಸಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Must Read