Friday, March 31, 2023

Latest Posts

ಬರೋಬ್ಬರಿ 2 ಲಕ್ಷ ಕ್ಯಾಡ್‌ಬರಿ ಕ್ರೀಮ್‌ ಎಗ್‌ ಚಾಕೊಲೇಟ್‌ ಮೇಲೆ ಕನ್ನ ಹಾಕಿದ ಭೂಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಂಡನ್ ನಲ್ಲಿ ಬರೋಬ್ಬರಿ 2 ಲಕ್ಷ ಕ್ಯಾಡ್‌ಬರಿ ಕ್ರೀಮ್‌ ಎಗ್‌ ಚಾಕೊಲೇಟ್‌ (Chocolate Eggs) ಮೇಲೆ ಕನ್ನ ಹಾಕಿದ ಖದೀಮನನ್ನು ಕೊನೆಗೂ ಪೊಲೀಸರು ಜೈಲಿಗಟ್ಟಿದ್ದಾರೆ.

ಜೋಬಿ ಪೂಲ್‌ (32) ಜೈಲು ಪಾಲಾದ ಆರೋಪಿ. ಈತ ಟೆಲ್ಫೋರ್ಡ್‌ ಕೈಗಾರಿಕಾ ಘಟಕಕ್ಕೆ ನುಗ್ಗಿ 30.63 ಲಕ್ಷ ರೂ. ಮೌಲ್ಯದ ಚಾಕೊಲೇಟ್‌ಗಳನ್ನು ಕಳ್ಳತನ ಮಾಡಿದ್ದನು .

ಈತ ಕಳ್ಳತನ ಮಾಡಿ ಎಸ್ಕೇಪ್‌ ಆಗುತ್ತಿದ್ದಾಗ ವಿಷಯ ತಿಳಿದು ಪೊಲೀಸರು ಬೆನ್ನಟ್ಟಿದ್ದಾರೆ. ತನ್ನನ್ನು ಹಿಂಬಾಲಿಸುತ್ತಿರುವುದನ್ನು ಅರಿತ ಆತ ವಾಹನವನ್ನು ನಿಲ್ಲಿಸಿದ್ದಾನೆ. ಆತ ಕದ್ದಿದ್ದ ಚಾಕೊಲೇಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವುಗಳನ್ನು ಮಾಲೀಕರಿಗೆ ತಲುಪಿಸುವ ಕಾರ್ಯ ಮಾಡತ್ತಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!