ಇಂಧನ, ಜೋಳ ತೆರಿಗೆ ಕಡಿತಕ್ಕೆ ಕೇಂದ್ರ ಸರಕಾರ ಚಿಂತನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಜೋಳ ಹಾಗೂ ಇಂಧನದ ತೆರಿಗೆ ಕಡಿತ ಮಾಡುವ ಚಿಂತನೆ ಮಾಡಿದೆ ಎಂದು ವರದಿಯಾಗಿದೆ.

ಫೆಬ್ರವರಿಯ ಹಣದುಬ್ಬರ ಡೇಟಾವನ್ನು ಬಿಡುಗಡೆ ಮಾಡಿದ ಬಳಿಕವೇ ಸರ್ಕಾರವು ಕೆಲವು ವಸ್ತುಗಳ ತೆರಿಗೆ ಕಡಿತವನ್ನು ಮಾಡುವ ನಿರ್ಧಾರ ಕೈಗೊಳ್ಳಬಹುದು. ದೇಶದ ವಾರ್ಷಿಕ ರಿಟೇಲ್ ಹಣದುಬ್ಬರ ದರವು ಜನವರಿಯಲ್ಲಿ ಶೇಕಡ 6.52ಕ್ಕೆ ಏರಿಕೆಯಾಗಿದೆ. ಡಿಸೆಂಬರ್‌ನಲ್ಲಿ ರಿಟೇಕ್ ಹಣದುಬ್ಬರವು ಶೇಕಡ 5.72 ಆಗಿತ್ತು.

ಜೋಳ ಮೊದಲಾದ ಆಹಾರ ಉತ್ಪನ್ನಗಳ ಆಮದು ಸುಂಕವನ್ನು ಕಡಿಮೆ ಮಾಡಲು ಸರ್ಕಾರವು ನಿರ್ಧಾರ ಮಾಡುವ ಚಿಂತನೆ ಮಾಡುತ್ತಿದೆ. ಈಗಾಗಲೇ ಈ ಆಹಾರ ಉತ್ಪನ್ನಗಳಿಗೆ ಶೇಕಡ 60ರಷ್ಟು ಸುಂಕವನ್ನು ವಿಧಿಸಲಾಗುತ್ತದೆ. ಇನ್ನು ಇಂಧನದ ತೆರಿಗೆಯನ್ನು ಕೂಡಾ ಕಡಿತ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಆದರೆ ಈ ವರದಿಗಳ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಜಾಗತಿಕವಾಗಿ ಇಂಧನ ಬೆಲೆಯು ಕಡಿಮೆಯಾಗುತ್ತಿದೆ. ಆದರೆ ಇಂಧನ ಸಂಸ್ಥೆಗಳು ಈವರೆಗೆ ಬೆಲೆ ಇಳಿಕೆಯನ್ನು ಮಾಡಿಲ್ಲ. ಬದಲಾಗಿ ಸಂಸ್ಥೆಗಳು ಈ ಹಿಂದೆ ಸಂಸ್ಥೆಗೆ ಉಂಟಾದ ನಷ್ಟವನ್ನು ಸರಿದೂಗಿಸುವ ಪ್ರಯತ್ನ ಮಾಡುತ್ತಿದೆ. ಭಾರತವು 2-3ರಷ್ಟು ಇಂಧನವನ್ನು ಆಮದು ಮಾಡುತ್ತಿದೆ. ಈಗ ಇಂಧನ ಆಮದು ಸುಂಕ, ತೆರಿಗೆ ಕಡಿತ ಮಾಡಿದರೆ ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!