Tuesday, July 5, 2022

Latest Posts

ಉತ್ತರ ಕೊರಿಯಾ ದಲ್ಲಿ 2 ಮಿಲಿಯನ್‌ ಕೊರೊನಾ ಸೋಂಕಿತರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಳೆದೆರಡು ವರ್ಷಗಳಲ್ಲಿ ಯವುದೇ ಕೊರೋನಾ ಪ್ರಕರಣಗಳನ್ನು ವರದಿ ಮಾಡದ ಉತ್ತರಕೊರಿಯಾದಲ್ಲಿ ಈಗ ಕೊರೋನಾ ಸ್ಫೋಟವು ಸಂಭವಿಸಿದೆ. ಸೂಕ್ತ ಆರೋಗ್ಯ ವ್ಯವಸ್ಥೆಗಳಿಲ್ಲದೇ ಉತ್ತರ ಕೊರಿಯಾದಲ್ಲಿ 2 ಮಿಲಿಯನ್‌ ಜನರು ಸೋಂಕಿಗೆ ತುತ್ತಾಗಿದ್ದಾರೆ ಎಂದು ಅಂತರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ.

ದೇಶದಲ್ಲಿ ವೈರಸ್‌ ಪರೀಕ್ಷೆ ಮತ್ತು ಇತರ ಆರೋಗ್ಯ ರಕ್ಷಣಾ ಸಂಪನ್ಮೂಲಗಳ ಕೊರತೆಯಿದೆ. ಇನ್ನೂ ದೇಶದ ಬಹುಪಾಲು ಜನತೆಗೆ ಕೊರೊನಾ ಲಸಿಕೆಯಾಗಿಲ್ಲ. ಆದರೂ ಕಿಮ್‌ ಜಾಂಗ್‌ ಉನ್‌ ರವರ ರಾಜಕೀಯ ಪ್ರಭಾವವು ತೊಂದರೆಯಾಗಬಾರದೆಂದು ಅತಿ ಕಡಿಮೆ ಸಾವುಗಳನ್ನು ವರದಿ ಮಾಡಲಾಗುತ್ತಿದೆ ಎನ್ನಲಾಗಿದೆ.

ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿಯ ಅಧಿಕೃತ  ಮಾಹಿತಿ ಪ್ರಕಾರ ಏಪ್ರಿಲ್ ಅಂತ್ಯದಿಂದ 1.98 ದಶಲಕ್ಷಕ್ಕೂ ಹೆಚ್ಚು ಜನರು ಜ್ವರದಿಂದ ಅಸ್ವಸ್ಥರಾಗಿದ್ದಾರೆ. ಹೆಚ್ಚಿನವರು ಕೋವಿಡ್-19 ಗೆ ತುತ್ತಾಗಿರಬಹುದು ಎಂದು ಅಂದಾಜಿಸಲಾಗಿದೆ. ಕನಿಷ್ಠ 7,40,160 ಜನರು ಕ್ವಾರಂಟೈನ್‌ನಲ್ಲಿದ್ದಾರೆ ಎಂದು ವರದಿ ಮಾಡಲಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss