ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಡ್ ಪ್ಲೇ ಬ್ರಿಟನ್ ಮೂಲದ ವಿಶ್ವಜನಪ್ರಿಯ ಮ್ಯೂಸಿಕ್ ಬ್ಯಾಂಡ್. ಇದೀಗ ಈ ಬ್ಯಾಂಡ್ನವರು ಭಾರತದಲ್ಲಿ ಲೈವ್ ಶೋ ಆಯೋಜನೆ ಮಾಡಿದ್ದಾರೆ.
ಶೋನ ಟಿಕೆಟ್ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ. ಹಲವಾರು ಮಂದಿ ಶೋನ ಟಿಕೆಟ್ ಸಿಗದೇ ಇರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಗಮನಿಸಿದ ಕೋಲ್ಡ್ ಪ್ಲೇ ಒಂದು ಶೋ ಅನ್ನು ಹೆಚ್ಚುವರಿಯಾಗಿ ಘೋಷಿಸಿ ಟಿಕೆಟ್ ಮಾರಾಟ ಮಾಡಿತಾದರೂ ಅದರ ಟಿಕೆಟ್ಗಳು ಸಹ ಕೆಲವೇ ನಿಮಿಷಗಳಲ್ಲಿ ಬಿಕರಿಯಾದವು. ಆದರೆ ಆ ಟಿಕೆಟ್ಗಳನ್ನು ಕೆಲವು ಸಂಸ್ಥೆಗಳು ಭಾರಿ ಮೊತ್ತಕ್ಕೆ ಬ್ಲಾಕ್ನಲ್ಲಿ ಮಾರಾಟ ಮಾಡಲು ಆರಂಭಿಸಿವೆ. ಈ ಬ್ಲಾಕ್ ಮಾರಾಟ ದೊಡ್ಡದಾಗಿ ಸದ್ದಾಗುತ್ತಿದ್ದಂತೆ ಟಿಕೆಟ್ ಮಾರಾಟ ಮಾಡಿದ್ದ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬುಕ್ಮೈ ಶೋ ಮತ್ತು ಲೈವ್ ನ್ಯಾಷನಲ್ ಎಂಟರ್ಟೈನ್ಮೆಂಟ್ ಸಂಸ್ಥೆಗಳು ಕೋಲ್ಡ್ ಪ್ಲೇ ಭಾರತದ ಕಾನ್ಸರ್ಟ್ನ ಟಿಕೆಟ್ ಅನ್ನು ಆನ್ಲೈನ್ ಮಾರಾಟ ಮಾಡಿದ್ದವು. ಆದರೆ ಈ ವೆಬ್ಸೈಟ್ಗಳಲ್ಲಿ ಕ್ಷಣದಲ್ಲಿ ಮಾರಾಟವಾದ ಟಿಕೆಟ್ಗಳು ಕೆಲವು ಬೇರೆ ವೆಬ್ಸೈಟ್ಗಳಲ್ಲಿ ಮತ್ತೆ ಮಾರಾಟಕ್ಕೆ ಸಿಕ್ಕವು ಅದೂ ಸುಮಾರು 20-30 ಪಟ್ಟು ಹೆಚ್ಚು ದರದಲ್ಲಿ. ಇದು ಕೋಲ್ಡ್ ಪ್ಲೇ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ವಕೀಲರೊಬ್ಬರು ಕೋಲ್ಡ್ ಪ್ಲೇ ಟಿಕೆಟ್ ಮಾರಾಟ ಹಗರಣದ ವಿಷಯವಾಗಿ ಆರ್ಥಿಕ ಅಪರಾಧ ವಿಭಾಗಕ್ಕೆ ಬುಕ್ ಮೈ ಶೋ ಮತ್ತು ಲೈವ್ ನ್ಯಾಷನಲ್ ಎಂಟರ್ಟೈನ್ಮೆಂಟ್ ಸಂಸ್ಥೆಗಳ ವಿರುದ್ಧ ದೂರು ದಾಖಲಿಸಿದ್ದು ಟಿಕೆಟ್ ಮಾರಾಟದಲ್ಲಿ ಈ ಸಂಸ್ಥೆಗಳು ಅವ್ಯಹಾರ ಎಸಗಿವೆ ಎಂದು ಆರೋಪ ಮಾಡಿದ್ದಾರೆ.