ಡೋಪಿಂಗ್ ಪರೀಕ್ಷೆ: ಅಥ್ಲೀಟ್ ವಿನೇಶ್‌ ಫೋಗಟ್‌ಗೆ ನಾಡಾ ನೋಟಿಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಅಥ್ಲೀಟ್ ವಿನೇಶ್ ಫೋಗಟ್ ಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಪ್ರಾಧಿಕಾರ (ನಾಡಾ) ನೋಟಿಸ್ ನೀಡಿದೆ.

ಹೌದು.. ಕುಸ್ತಿಪಟು ವಿನೇಶ್​ ಪೋಗಟ್​ ಅವರು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಪ್ರಾಧಿಕಾರ  ನಡೆಸುವ ಪರೀಕ್ಷೆಯಿಂದ ತಪ್ಪಿಸಿಕೊಂಡಿದ್ದು, ಈ ಸಂಬಂಧ ಪ್ರಾಧಿಕಾರ ನೋಟಿಸ್​​ ಜಾರಿ ಮಾಡಿದೆ.

ಹರಿಯಾಣದ ಸೋನಿಪತ್‌ನಲ್ಲಿರುವ ವಿನೇಶ್ ಅವರ ನಿವಾಸಕ್ಕೆ ಡೋಪ್ ನಿಯಂತ್ರಣ ಅಧಿಕಾರಿಯನ್ನು ಸೆಪ್ಟೆಂಬರ್ 9 ರಂದು ಕಳುಹಿಸಲಾಗಿತ್ತು. ಆ ವೇಳೆ ಕುಸ್ತಿಪಟು ಮನೆಯಲ್ಲಿ ಇರಲಿಲ್ಲ. ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಪೋಗಟ್​ ಗೆ ನಾಡಾ ನೋಟಿಸ್​ ನೀಡಿದ್ದು, 14 ದಿನಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!