ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈ ಮೇಲೆ ಟೀ ಚೆಲ್ಲಿಕೊಂಡು ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹಿರೀಮನೆ ಗ್ರಾಮದ ರಾಜೇಶ್ ಹಾಗೂ ಅಶ್ವಿನಿ ದಂಪತಿ ಪುತ್ರ ಅಥರ್ವ (2) ಮೃತ ಬಾಲಕ.
ಅಸಲಿಗೆ ಆಗಿದ್ದೇನು?
ಅಕ್ಟೋಬರ್ 24ರಂದು ಹೊಸನಗರದ ಹಿರೀಮನೆಯಲ್ಲಿ ಅಥರ್ವ ತಂದೆ ರಾಜೇಶ್ ಅವರ ಮನೆಯ ಪಕ್ಕದ ನಿವಾಸಿ ಮೃತಪಟ್ಟಿದ್ದರು. ನೆರೆಮನೆ ನಿವಾಸಿ ಅಂತಿಮ ದರ್ಶನ ಪಡೆಯಲು ಬಂದಿದ್ದ ಸಂಬಂಧಿಕರಿಗೆ ರಾಜೇಶ್ ಪತ್ನಿ ಅಶ್ವಿನಿ ಟೀ ರೆಡಿ ಮಾಡಿಟ್ಟಿದ್ದರು. ಅಥರ್ವ ಟೀ ಪಾತ್ರೆಯನ್ನು ಮೈಮೇಲೆ ಬೀಳಿಸಿಕೊಂಡು ಗಾಯಗೊಂಡಿದ್ದ.
ಬಿಸಿ, ಬಿಸಿ ಟೀ ಪಾತ್ರೆ ಮೈಮೇಲೆ ಬೀಳಿಸಿಕೊಂಡು ಗಾಯಗೊಂಡಿದ್ದ ಅಥರ್ವನನ್ನ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ 2 ವರ್ಷದ ಅಥರ್ವ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ.
ನೆರೆ ಮನೆಯವರಿಗೆ ಸಹಾಯ ಮಾಡಲು ಹೋದ ರಾಜೇಶ್, ಅಶ್ವಿನಿ ದಂಪತಿ ಮಗ ಬೆಂದು, ನೊಂದು ದುರಂತ ಅಂತ್ಯ ಕಂಡಿದ್ದಾನೆ. ಅಥರ್ವನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.