ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿ ದೀಪಾವಳಿಯಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪೋಷಕರಾಗುತ್ತಿರುವ ಸಿಹಿಸುದ್ದಿಯನ್ನು ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
ಈ ಶುಭ ದಿನದಂದು ನಿಮ್ಮೆಲ್ಲರೊಡನೆ ಶುಭ ಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ. ಹೌದು, ನಾವು ನಮ್ಮ ‘ಕುಡಿ’ಗಾಗಿ ಎದುರು ನೋಡುತ್ತಿದ್ದೇವೆ. ನಿಮ್ಮೆಲ್ಲರ ಹಾರೈಕೆ, ಆರ್ಶಿವಾದಗಳ ನಿರೀಕ್ಷೆಯಲ್ಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ವಸಿಷ್ಠ ಸಿಂಹ ದಂಪತಿ ಅಧಿಕೃತವಾಗಿ ತಿಳಿಸಿದ್ದಾರೆ.
ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕಳೆದ ವರ್ಷ ಜನವರಿ 26ರಂದು ಮೈಸೂರಿನಲ್ಲಿ ಹಸೆಮಣೆ ಏರಿದ್ದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು.