ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ದಿನಗಳಿಂದ ತೆಲುಗು ರಾಜ್ಯಗಳಲ್ಲಿ ಮಕ್ಕಳ ಅಪಹರಣ ಸಂಚಲನ ಮೂಡಿಸುತ್ತಿದೆ. ಎರಡು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ಇಬ್ಬರು ಬಾಲಕರು ಕಿಡ್ಯ್ನಾಪ್ ಅದ ಬೆನ್ನಲ್ಲೇ ಇದೀಗ ತಿರುಪತಿ ಬಸ್ ನಿಲ್ದಾಣದಲ್ಲಿ ಮತ್ತೊಬ್ಬ ಬಾಲಕನನ್ನು ಅಪಹರಿಸಲಾಗಿದೆ.
ತಿರುಪತಿ ಆರ್‌ಟಿಸಿ ಬಸ್ ನಿಲ್ದಾಣದ ಫ್ಲಾಟ್ ಫಾರಂ 3ರ ಬಳಿ ಎರಡು ವರ್ಷದ ಬಾಲಕನನ್ನು ಅಪರಿಚಿತ ವ್ಯಕ್ತಿಗಳು ಕಿಡ್ಯ್ನಾಪ್ ಮಾಡಿದ್ದಾರೆ. ಶ್ರೀವಾರಿ ದರುಶನ ಮುಗಿಸಿ ಹಿಂದಿರುಗುವ ಸಲುವಾಗಿ ತಿರುಪತಿಯ ಚೆನ್ನೈ ಪ್ಲಾಟ್‌ಫಾರ್ಮ್ ಬಳಿ ರಾತ್ರಿ ಈ ಘಟನೆ ನಡೆದಿದೆ.
ಬಾಲಕ ಕಿಡ್ನಾಪ್ ಆಗಿರುವುದನ್ನು ಪೋಷಕರು ತಿರುಪತಿ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪಹರಣಕ್ಕೊಳಗಾದ ಬಾಲಕನನ್ನು ಚೆನ್ನೈನ ವರಸವಕ್ಕಂನ ಚಂದ್ರಶೇಖರ್-ಮೀನಾ ದಂಪತಿಯ ಪುತ್ರ ಅರುಲ್ ಮುರುಗನ್ (2) ಎಂದು ಗುರುತಿಸಲಾಗಿದೆ. ಬಸ್ ನಿಲ್ದಾಣದ ಬಳಿಯ ಅಂಬೇಡ್ಕರ್ ಪ್ರತಿಮೆ ವೃತ್ತದ ಬಳಿಯ ಕಾನ್ಸಾಸ್ ಹೋಟೆಲ್‌ಗೆ ಬಾಲಕನೊಂದಿಗೆ ಅಪಹರಣಕಾರ ಹೋಗಿರುವುದು ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿಗಾರೆ.
ಅಪಹರಣಕಾರನಿಗೆ 32 ವರ್ಷ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಅಪಹರಣಕಾರ ಬಿಳಿ ಶೂ, ಹಸಿರು ಬಣ್ಣದ ಶರ್ಟ್ ಧರಿಸಿದ್ದ. ಮಧ್ಯರಾತ್ರಿ 2.20 ನಿಮಿಷಕ್ಕೆ ಬಾಲಕನನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಅಪಹರಣಕಾರರಿಗಾಗಿ ವಿಶೇಷ ತಂಡ ರಚಿಸಿದ್ದು, ತೀವ್ರ ಶೋಧ ನಡೆಸಲಾಗುತ್ತಿದೆ ತಿರುಪತಿ ಪೂರ್ವ ಪಿಎಸ್ ಪೊಲೀಸರು ಬಹಿರಂಗಪಡಿಸಿದ್ದಾರೆ.