ASIAN GAMES 2023| ಕಬಡ್ಡಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತಕ್ಕೆ ಜಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚೀನಾದ ಹಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಕಬಡ್ಡಿ ತಂಡ ತನ್ನ ಮೊದಲ ಅಭಿಯಾನ ಆರಂಭಿಸಿದೆ. ಮೊದಲ ಪಂದ್ಯದಲ್ಲೇ ಬಾಂಗ್ಲಾದೇಶ ತಂಡವನ್ನು 55-18 ಅಂಕಗಳಿಂದ ಸೋಲಿಸಿದೆ.

ಈ ಪಂದ್ಯದ ಆರಂಭ ಹಂತದಿಂದಲೂ ಭಾರತ ಕಬಡ್ಡಿ ತಂಡ ಬಾಂಗ್ಲಾದೇಶದ ವಿರುದ್ಧ ಹಣಾಹಣಿ ನಡೆಸಿತ್ತು. ಅಲ್ಲದೇ ನವೀನ್ ಮತ್ತು ಅರ್ಜುನ್ ದೇಸ್ವಾಲ್ ಉತ್ತಮ ಪ್ರದರ್ಶನ ನೀಡಿದರು.

ಮೊದಲಾರ್ಧದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 19 ಅಂಕಗಳ ಮುನ್ನಡೆ ಸಾಧಿಸಿತ್ತು. ಮೊದಲಾರ್ಧದಲ್ಲಿ ಸ್ಕೋರ್ 24-9 ಇತ್ತು. ದ್ವಿತೀಯಾರ್ಧದಲ್ಲಿ ಭಾರತ ಹೆಚ್ಚು ಆಕ್ರಮಣಕಾರಿಯಾಗಿ ಭಾಗವಹಿಸಿತು. ಅಂತಿಮವಾಗಿ ಭಾರತ 55-18 ಅಂಕಗಳ ಅಂತರದಿಂದ ಭರ್ಜರಿ ಜಯ ಕಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!