Saturday, April 1, 2023

Latest Posts

20 ಮಕ್ಕಳ ಶೈಕ್ಷಣಿಕ ಜವಾಬ್ದಾರಿ ವಹಿಸಿ ಸರಳ ಮದುವೆಯಾದ ಸರ್ಕಾರಿ ಅಧಿಕಾರಿ ಜೋಡಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

20 ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಸರ್ಕಾರಿ ಅಧಿಕಾರಿಗಳಿಬ್ಬರು ಮಾದರಿಯಾಗಿದ್ದಾರೆ. ಈ ದಂಪತಿಯ ಮಹಾತ್ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಾಗರಿಕ ಸೇವಾ ಪರೀಕ್ಷೆಯಲ್ಲಿ ಉನ್ನತ ರ್‍ಯಾಂಕ್ ಪಡೆದ ಆರ್ಯಾ ಆರ್.​ ನಾಯರ್​ ಮತ್ತು ಅಹಮದಾಬಾದ್​ನ ಭಾರತೀಯ ಅಂಚೆ ಸೇವೆಯ (ಐಪಿಒಎಸ್​) ಸೂಪರಿಂಟೆಂಡೆಂಟ್​ ಶಿವಂ ತ್ಯಾಗಿ ಅವರೇ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟು 20 ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ನೆರವಾದವರು.

ಇವರಿಬ್ಬರ ಮದುವೆ ಪಂಪಾಡಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿಶೇಷ ವಿವಾಹ ಕಾಯಿದೆಯಂತೆ ನಡೆಯಿತು. ಆ ಬಳಿಕ ಕೊಟ್ಟಾಯಂನ ವಝೂರ್‌ನಲ್ಲಿರುವ ‘ಪುಣ್ಯಂ’ ಎಂಬ ಮಕ್ಕಳ ಮನೆಯಲ್ಲಿರುವ 20 ಮಕ್ಕಳ ಶೈಕ್ಷಣಿಕ ವೆಚ್ಚದ ಜವಾಬ್ದಾರಿಯನ್ನು ಈ ನವದಂಪತಿ ವಹಿಸಿಕೊಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!