20ಲಕ್ಷ ಕೋಟಿ ರೂ. ವ್ಯವಹಾರ ಮೈಲಿಗಲ್ಲು ಸಾಧಿಸಿದೆ ಕೆನರಾ ಬ್ಯಾಂಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದ ಹೆಮ್ಮೆಯ ಬ್ಯಾಂಕುಗಳಲ್ಲೊಂದಾದ ಕೆನರಾ ಬ್ಯಾಂಕ್‌ ಒಟ್ಟಾರೆ ವ್ಯವಹಾರದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಶುಕ್ರವಾರ 20 ಲಕ್ಷ ಕೋಟಿ ರೂಪಾಯಿಗಳ ವ್ಯವಹಾರ ಮೈಲಿಗಲ್ಲು ಸಾಧಿಸಿರುವುದಾಗಿ ಕೆನರಾ ಬ್ಯಾಂಕ್‌ ಹೇಳಿದೆ.

“ಕೆನರಾ ಬ್ಯಾಂಕ್ 22 ಡಿಸೆಂಬರ್ 2022 ಕ್ಕೆ 20,00,000 ಕೋಟಿ ರೂಪಾಯಿಗಳ ಒಟ್ಟು ಜಾಗತಿಕ ವ್ಯವಹಾರವನ್ನು ದಾಟುವ ಮೈಲಿಗಲ್ಲನ್ನು ಸಾಧಿಸಿದೆ” ಎಂದು ಬ್ಯಾಂಕ್ ಬಿಎಸ್‌ಇ ಗೆ ಸಲ್ಲಿಸಿದ ಫೈಲಿಂಗ್‌ ನಲ್ಲಿ ತಿಳಿಸಿದೆ. ಶುಕ್ರವಾರ ಕೆನರಾ ಬ್ಯಾಂಕ್‌ನ ಷೇರುಗಳು ಬಿಎಸ್‌ಇಯಲ್ಲಿ 291.45 ರೂ.ಕ್ಕೆ ಮುಕ್ತಾಯಗೊಂಡಿದ್ದು, ಶೇ.6.54ರಷ್ಟು ಕುಸಿದಿದೆ.

ಕೆನರಾ ಬ್ಯಾಂಕ್‌ ಅನ್ನು 1906ರಲ್ಲಿ ಮಂಗಳೂರಿನಲ್ಲಿ ಅಮ್ಮೆಂಬಳ ಸುಬ್ಬಾ ರಾವ್ ಪೈ ಅವರ ನೇತೃತ್ವದಲ್ಲಿ ಸ್ಥಾಪಿತವಾಯಿತು. ಬ್ಯಾಂಕ್ ಲಂಡನ್, ದುಬೈ ಮತ್ತು ನ್ಯೂಯಾರ್ಕ್‌ನಲ್ಲಿ ಕಚೇರಿಗಳನ್ನು ಹೊಂದಿದೆ. ಒಟ್ಟೂ 9,722 ಶಾಖೆಗಳನ್ನು ಬ್ಯಾಂಕ್‌ ಹೊಂದಿದ್ದು ಮಾರ್ಚ್‌ 2022ರಂತೆ 86,919 ಉದ್ಯೋಗಿಗಳನ್ನು ಹೊಂದಿದೆ. ಈ ವರ್ಷ ಸಿಂಡಿಕೇಟ್‌ ಬ್ಯಾಂಕಿನೊಂದಿಗೆ ಕೆನರಾ ಬ್ಯಾಂಕನ್ನು ಸೇರಿಸಲಾಗಿದ್ದು ದೇಶದ ನಾಲ್ಕನೇ ಅತಿದೊಡ್ಡ ಬ್ಯಾಂಕ್‌ ಎಂಬ ಖ್ಯಾತಿಗೆ ಕೆನರಾಬ್ಯಾಂಕ್‌ ಪಾತ್ರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!