ಎನ್‌ಪಿಎಸ್ ರದ್ದತಿಗೆ ಮಾರ್ಚ್ ಬಳಿಕ ಹೋರಾಟ: ಷಡಕ್ಷರಿ

ಹೊಸದಿಗಂತ ವರದಿ ಶಿವಮೊಗ್ಗ:

ಬರುವ ಮಾರ್ಚ್ ನಂತರ ಹಳೆಯ ಪಿಂಚಣಿ ಜಾರಿಗಾಗಿ ನಿರ್ಣಾಯಕ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಎಲ್ಲಾ ಬೇಡಿಕೆಗಳನ್ನು ಒಮ್ಮೆಲೇ ಈಡೇರಿಸಿ ಎಂದು ಸರ್ಕಾರದ ಮುಂದೆ ಸವಾಲು ಹಾಕಲು ಆಗುವುದಿಲ್ಲ.

ಸದ್ಯ ಸರ್ಕಾರ ಅವಗೂ ಮುನ್ನವೇ 7ನೇ ವೇತನ ಆಯೋಗ ರಚನೆ ಮಾಡಿದೆ. ಆಯೋಗ ಇನ್ನು ಒಂದೆರೆಡು ತಿಂಗಳಲ್ಲಿ ವರದಿ ನೀಡುವ ಸಾಧ್ಯತೆ ಇದೆ. ವರದಿ ನೀಡಿದ ತಕ್ಷಣ ರಾಜ್ಯ ಸರ್ಕಾರ ಅನುಮೋದಿಸಲಿದೆ. ಹಾಗಾಗಿ ಈ ಹಂತದಲ್ಲಿ ಪಿಂಚಣಿ ಯೋಜನೆ ಜಾರಿ ಹೋರಾಟ ಕೈಗೆತ್ತಿಕೊಂಡಿಲ್ಲ ಎಂದು ತಿಳಿಸಿದರು.

ಈಗ ಎನ್‌ಪಿಎಸ್ ರದ್ದುಗೊಳಿಸುವಂತೆ ಹೋರಾಟ ನಡೆಸುತ್ತಿರುವವರು ಕೂಡಾ ನಮ್ಮ ಅಣ್ಣ ತಮ್ಮಂದಿರೇ. ಸರ್ಕಾರಿ ನೌಕರರಲ್ಲಿ ಯಾವುದೇ ಬೇದ, ಭಾವ ಇಲ್ಲಘಿ. ಹಿಂದೆ ತಮ್ಮ ವಿರುದ್ಧ ಪರಾಭವ ಅನುಭವಿಸಿದವರು ಹೋರಾಟಕ್ಕೆ ಇಳಿಸಿರುವ ಸಾಧ್ಯತೆ ಇದೆ. ಆದರೆ ಏನೇ ಇದ್ದರೂ ಹಳೆಯ ಪಿಂಚಣಿ ಜಾರಿಗೆ ಆಗ್ರಹ ನಮ್ಮ ಕಡೆಯಿಂದ ಇದ್ದೇ ಇರುತ್ತದೆ ಎಂದು ಇರುತ್ತದೆ ಎಂದು ತಿಳಿಸಿದರು. ನೌಕರ ಸಂಘದ ಪದಾಧಿಕಾರಿಗಳಾದ ಅರುಣ್‌ಕುಮಾರ್, ಹೆಚ್.ಬಿ.ಚನ್ನಪ್ಪ, ಮಾರುತಿ, ಮೋಹನ್‌ಕುಮಾರ್ ಇನ್ನಿತರರು ಸುದ್ದಿಗೋಷ್ಟಿಯಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!