Sunday, March 26, 2023

Latest Posts

ಮುಕ್ತ ಮಾರುಕಟ್ಟೆಯಲ್ಲಿ 20 ಲಕ್ಷ ಟನ್ ಗೋಧಿ ಮಾರಾಟ: ಕೇಂದ್ರ ಸರಕಾರ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರ ಗೋಧಿ ಮತ್ತು ಗೋಧಿ ಹಿಟ್ಟಿನ (ಅಟ್ಟಾ) ಚಿಲ್ಲರೆ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲು ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚುವರಿ 20 ಲಕ್ಷ ಟನ್ ಗೋಧಿಯನ್ನು ಮಾರಾಟ ಮಾಡುವುದಾಗಿ ಮಂಗಳವಾರ ಘೋಷಿಸಿದೆ.

ಗೋಧಿ ಮತ್ತು ಹಿಟ್ಟಿನ ಬೆಲೆ ಏರಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ತನ್ನ ಬಫರ್ ಸ್ಟಾಕ್ ನಿಂದ ಮುಕ್ತ ಮಾರುಕಟ್ಟೆಯಲ್ಲಿ 30 ಲಕ್ಷ ಟನ್ ಗೋಧಿಯನ್ನು ಮಾರಾಟ ಮಾಡುವುದಾಗಿ ಜನವರಿ 25 ರಂದು ಘೋಷಿಸಿತ್ತು. ಸರ್ಕಾರಿ ಸ್ವಾಮ್ಯದ ಭಾರತೀಯ ಆಹಾರ ನಿಗಮ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ 20 ಲಕ್ಷ ಟನ್ಗಳಷ್ಟು ಹೆಚ್ಚುವರಿ ಪ್ರಮಾಣದ ಗೋಧಿಯನ್ನು ಆಫ್ಲೋಡ್ ಮಾಡಲು ನಿರ್ಧರಿಸಿದೆ ಎಂದು ಅಧಿಕೃತ ಹೇಳಿಕೆಗಳು ತಿಳಿಸಿವೆ.

ಹಿಟ್ಟಿನ ಗಿರಣಿಗಳು, ಖಾಸಗಿ ವ್ಯಾಪಾರಿಗಳು, ಬೃಹತ್ ಖರೀದಿದಾರರು, ಗೋಧಿ ಉತ್ಪನ್ನಗಳ ತಯಾರಕರಿಗೆ ಇ-ಹರಾಜಿನ ಮೂಲಕ ದಾಸ್ತಾನುಗಳನ್ನು ಮಾರಾಟ ಮಾಡಲಾಗುತ್ತದೆ.

ಇಲ್ಲಿಯವರೆಗೂ 50 ಲಕ್ಷ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಆಫ್ಲೋಡ್ ಮಾಡಲು ನಿರ್ಧರಿಸಲಾಗಿದೆ. ಹೆಚ್ಚುವರಿ 20 ಲಕ್ಷ ಟನ್ ಗೋಧಿ ಅಫ್ ಲೋಡ್ ನೊಂದಿಗೆ ಮೀಸಲು ಬೆಲೆಯಲ್ಲಿ ಇಳಿಕೆ ಗ್ರಾಹಕರಿಗೆ ಗೋಧಿ ಮತ್ತು ಗೋಧಿ ಉತ್ಪನ್ನಗಳ ಮಾರುಕಟ್ಟೆ ಬೆಲೆ ಇಳಿಕೆಗೆ ನೆರವಾಗಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!