Friday, March 31, 2023

Latest Posts

ತಿರುಪತಿ ತಿಮ್ಮಪ್ಪನ ದರುಶನ ಪಡೆದ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದಂಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್​ ಇಂಡಿಯಾದ ಸ್ಫೋಟಕ ಬ್ಯಾಟರ್​ ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿ ದೇವಿಶಾ ಶೆಟ್ಟಿಯೊಂದಿಗೆ ಮಂಗಳವಾರ (ಫೆಬ್ರವರಿ 21)ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನ ದರುಶನ ಪಡೆದರು.

ಈ ಕುರಿತು ಟ್ವಿಟರ್​ನಲ್ಲಿ ಸೂರ್ಯಕುಮಾರ್​ ಯಾದವ್ ಫೋಟೋ ಹಂಚಿಕೊಂಡಿದ್ದಾರೆ.

ಬಾಲಾಜಿಯ ದರುಶನ ಪಡೆದ ನಂತರ ತಿರುಮಲದ ರಂಗನಾಯಕ ಮಂಟಪದಲ್ಲಿ ವೈದಿಕರು ಆಶೀರ್ವಚನ ನೀಡಿದರು. ಬಳಿಕ ದೇಗುಲದ ಅಧಿಕಾರಿಗಳು ಸೂರ್ಯಕುಮಾರ್ ಯಾದವ್ ದಂಪತಿಗೆ ರೇಷ್ಮೆ ವಸ್ತ್ರವನ್ನು ನೀಡಿ ಗೌರವಿಸಿದರು.

ಈ ಹಿಂದೆ ಭಾರತ ತಂಡ ತಿರುವನಂತಪುರಂಗೆ ಹೋದಾಗಲೂ ಅನಂತ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ದಂಪತಿ ತೆರಳಿ ಪೂಜೆ ಸಲ್ಲಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!