ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್‌ನಲ್ಲಿ 20 ಸಾವಿರ ವಿದೇಶಿ ಸ್ವಯಂ ಸೇವಕರು ಇಕ್ಕಟ್ಟಾಗಿದ್ದಾರೆ.
ಹೌದು, ಉಕ್ರೇನ್ ಸೇನೆಯಷ್ಟೇ ಅಲ್ಲ, ಅಲ್ಲಿನ ನಾಗರಿಕರೂ ಹೋರಾಡಲು ಕೈ ಜೋಡಿಸಿದ್ದಾರೆ. ಇವರ ಜೊತೆಗೆ 52 ಇತರ ದೇಶಗಳ 20 ಸಾವಿರ ಸೈನಿಕರು ಸೇರಿದ್ದಾರೆ ಎಂದು ಉಕ್ರೇನ್‌ನ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿದೆ.
ಈಗಾಗಲೇ ಹಲವು ವಿದೇಶಿಯರು ಉಕ್ರೇನ್‌ನಲ್ಲಿದ್ದು, ರಷ್ಯಾ ದಾಳಿಯ ವಿರುದ್ಧ ಹೋರಾಟಕ್ಕೆ ಕೈಗೆ ಬಂದೂಕು ಹಿಡಿದಿದ್ದಾರೆ ಎಂದು ಆಂತರಿಕ ವ್ಯವಹಾರಗಳ ಸಚಿವಾಲಯದ ಕಿರಿಯ ಸಚಿವ ಯೆವ್ಹೆನ್ ಯೆನಿನ್ ಹೇಳಿದ್ದಾರೆ.