ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಮೊದಲ ಬಾಲಿವುಡ್ ಸಿನಿಮಾ ರಿಲೀಸ್ ಡೇಟ್ ಇದೀಗ ಅನೌನ್ಸ್ ಆಗಿದೆ. ಬಾಲಿವುಡ್‌ನ ಮಿಷನ್ ಮಜ್ನು ಸಿನಿಮಾ ರಿಲೀಸ್‌ಗೆ ಮಹೂರ್ತ ಫಿಕ್ಸ್ ಆಗಿದ್ದು, ಜೂ.10 ರಂದು ಸಿನಿಮಾ ತೆರೆಕಾಣಲಿದೆ. 1970ರ ದಶಕದ ಬೇಹುಗಾರಿಕೆ ಕಥೆಯನ್ನು ಈ ಸಿನಿಮಾ ಹೊಂದಿದ್ದು, ಸಿದ್ಧಾರ್ಥ್ ಮಲ್ಹೋತ್ರ ರಾ ಏಜೆಂಟ್ ಪಾತ್ರ ನಿರ್ವಹಿಸಿದ್ದಾರೆ.
ಪಾಕಿಸ್ತಾನಿ ನೆಲದಲ್ಲಿ ರಹಸ್ಯ ಕಾರ್ಯಾಚರಣೆ ನಡೆಸುವ ಕುರಿತ ಚಿತ್ರ ಇದಾಗಿದೆ. ಸಿನಿಮಾಗೆ ಶಂತನು ಬಾಗ್ಚಿ ಆಕ್ಷನ್ ಕಟ್ ಹೇಳಿದ್ದಾರೆ. ಎಲ್ಲ ಸಿನಿ ರಂಗಗಳಲ್ಲಿಯೂ ಆಕ್ಟೀವ್ ಆಗಿರುವ ರಶ್ಮಿಕಾ ಈ ಸಿನಿಮಾ ಬಗ್ಗೆ ತುಂಬಾನೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರೇಕ್ಷಕ ಯಾವ ರೀತಿ ಇದನ್ನು ಸ್ವೀಕರಿಸುತ್ತಾನೆ ಕಾದುನೋಡಬೇಕಿದೆ.