ಐಟಿ ದಾಳೀಲಿ 200 ಕೋಟಿ ಹಣ ಜಪ್ತಿಯಾಗಿದೆ, ಕಾಂಗ್ರೆಸ್‌ನವ್ರು ಇದ್ರ ಬಗ್ಗೆ ಯಾಕ್ ಮಾತಾಡೋದಿಲ್ಲ? : ಪ್ರಲ್ಹಾದ ಜೋಶಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಜಾರ್ಖಂಡ್‌ನ ಕಾಂಗ್ರೆಸ್ ಸಂಸದ ಧೀರಜ್ ಪ್ರಸಾದ್ ಸಾಹು ಅವರಿಗೆ ಸೇರಿದ್ದು ಎನ್ನಲಾದ ಉದ್ಯಮ ಸಮೂಹ ಸಂಸ್ಥೆ ಮೇಲೆ ಐ.ಟಿ ಅಧಿಕಾರಿಗಳು ದಾಳಿ ನಡೆಸಿದ್ದು, 200 ಕೋಟಿ ಹಣ ಜಪ್ತಿಗೆ ಮಾಡಿದ್ದಾರೆ. ಈ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ನವರು ಯಾಕೆ ಮಾತನಾಡುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಯವರಿಗೆ ಬಹಳ ಹತ್ತಿರದವರು. ರಾಹುಲ್ ಗಾಂಧಿ ಭ್ರಷ್ಟಾಚಾರದ ಹಾಗೂ ಮೊಹಬತ್ ಕಾ ದುಖಾನ್ ಬಗ್ಗೆ ಮಾತನಾಡುತ್ತಾರೆ. ಮೊಹಬತ್ ದುಖಾನ್ ನಲ್ಲಿ ಮೊದಲು ಸಿಗುವುದು ಭ್ರಷ್ಟಾಚಾರದ ಹಣ. ರಾಹುಲ್ ಗಾಂಧಿ ಈ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ನವರು ಭ್ರಷ್ಟಾಚಾರದ ಬಗ್ಗೆ ಒಂದು ಶಬ್ಧ ಮಾತನಾಡುತ್ತಿಲ್ಲ ಎಂದು ಹರಿಹಾಯ್ದರು.

ಉಚ್ಛಾಟಿತ ಸಂಸದೆ ಮಹುವಾ ಮೊಯಿತ್ರಾ ಅಂತ್ಯತ ಕೀಳಾಗಿ ಹಿಂದೂ ಬಗ್ಗೆ ಮಾತನಾಡುತ್ತಿದ್ದರು ಅಂಥವರಿಗೆ ಈಗ ದ್ರೌಪದಿ ವಸ್ತ್ರಭರಣದ ಬಗ್ಗೆ ಗೊತ್ತಾಗಿದೆ. ಭಾರತ ಸರ್ಕಾರ ಲಾಗಿಂನ್ ಖಾತೆ, ಅಧಿಕೃತ ಇ‌ ಮೇಲ್ ನೀಡಿದೆ. ಅದೇಲ್ಲ ಐಡಿ ನೀವು ಉದ್ಯಮಿಯೊಬ್ಬರಿಗೆ ನೀಡಿದ್ದಾರೆ ಎಂದರು.

ಉದ್ಯಮಿ ನೀಡಿದ ಸ್ಕ್ಯಾಪ್ ಬಗ್ಗೆ ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಅದರ ಬೆಲೆ 2.5 ಲಕ್ಷವಾಗಿದೆ. ಇವರು ಇಲ್ಲಿಯವರೆಗೆ ಆದಾಯ ತೆರಿಗೆ ತುಂಬಿದ್ದು, ಕೇವಲ 4 ಲಕ್ಷ ರೂಪಾಯಿ. ಇಷ್ಟೊಂದು ಹಣ ಎಲ್ಲಿಂದ ಬಂದಿದೆ ಎಂದು ಪ್ರಶ್ನಿಸಿದರು.

ಸದನದಲ್ಲಿ ಕೇಳಿದ 60 ಪ್ರಶ್ನೆಗಳಲ್ಲಿ 45 ಹೆಚ್ಚು ಪ್ರಶ್ನೆಗಳು ಸ್ನೇಹಿತರ ಉದ್ಯಮಕ್ಕೆ ಅನುಕೂಲಕ್ಕೆ ಸಂಬಂಧಿಸಿದಾಗಿದೆ. 36 ಬಾರಿ ದೆಹಲಿಯಿಂದ ಹೊರ ದೇಶಕ್ಕೆ ಪ್ರಯಾಣ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಹಳಷ್ಟು ಅವಕಾಶ ಕೊಡಲಾಗಿತ್ತು ಎಂದು ತಿಳಿಸಿದರು.

ಮೊಯಿತ್ರಾ ಹಾಗೂ ಸಂಸದ ಧೀರಜ್ ಪ್ರಸಾದ್ ಸಾಹು ಭ್ರಷ್ಟಾಚಾರ ಮಾಡಿದ ಹಣ ದೇಶದ ಜನರದಾಗಿದೆ. ಅದನ್ನು ಒಂದು ಪೈಸೆ ಸಹ ನಾವು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಟ್ವಿಟ್ ಮಾಡಿದ್ದಾರೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!