ಐಸಿಸ್ ಉಗ್ರರ ಜೊತೆ ನಂಟು: ಬೆಂಗಳೂರು ಸಹಿತ ಹಲವೆಡೆ ಎನ್‌ಐಎ ಮಿಂಚಿನ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಐಸಿಸ್ ಜೊತೆಗೆ ನಿಕಟ ಸಂಪರ್ಕದ ಜೊತೆಗೆ ಐಸಿಸ್ ಉಗ್ರ ಸಿದ್ದಾಂತವನ್ನು ಭಾರತದಲ್ಲಿ ಬಿತ್ತಲು ಸಂಚು ನಡೆದಿದೆ ಎಂಬ ಗುಪ್ತಚರ ಮಾಹಿತಿಯನ್ನು ಬೆನ್ನತ್ತಿರುವ ಎನ್ ಐಎ ತಂಡ ಇಂದು ಬೆಂಗಳೂರು ಹಾಗೂ ಮಹಾರಾಷ್ಟ್ರದ ಹಲವೆಡೆಗಳಲ್ಲಿ ಮಿಂಚಿನ ದಾಳಿ ನಡೆಸಿದೆ.

ಬೆಂಗಳೂರು ನಗರದ ಪ್ರಜರ್ ಟೌನ್ ಮೋರ್ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ದಾಳಿ ನಡೆಸಿರುವ ಅಧಿಕಾರಿಗಳ ತಂಡ ಹಲವು ಮಾಹಿತಿಗಳನ್ನು ಕಲೆಹಾಕಿದೆ.

ಇನ್ನು ಮಹಾರಾಷ್ಟ್ರದ ಪುಣೆಯ ಎರಡು ಕಡೆ, ಥಾಣೆ ಗ್ರಾಮಾಂತರದ 31 ಕಡೆ, ಥಾಣೆ ನಗರದ 9‌ ಕಡೆ ಹಾಗೂ ಭಾಯಂದರ್‌ನ 1 ಕಡೆ ಕೂಡಾ ದಾಳಿ ನಡೆದಿದೆ. ಈ ಸಂಬಂಧ 13 ಮಂದಿ ಶಂಕಿತರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಶಂಕಿರು ಐಸಿಸ್ ಜೊತೆಗೆ ನಿಲಟ ಸಂಪರ್ಕ ಹೊಂದಿದ್ದು, ಭಾರತದಲ್ಲಿ ಐಸಿಸ್ ಸಿದ್ದಾಂತ ಹರಡುವ ಪ್ರಯತ್ನ ಮಾಡುತ್ತಿದ್ದರು ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!