‘ಬಿಲ್ಲು-ಬಾಣ’ ಖರೀದಿಸಲು 2,000 ಕೋಟಿ ರೂ. ಡೀಲ್: ಶಿಂದೆ ಬಣದ ವಿರುದ್ಧ ಸಂಜಯ್ ರಾವತ್ ಆರೋಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಶಿವಸೇನಾದ (Shiv sena) ಹೆಸರು ಮತ್ತು ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಖರೀದಿಸಲು ₹ 2,000 ಕೋಟಿ ವ್ಯವಹಾರ ನಡೆದಿದೆ ಎಂದು ಶಿವಸೇನಾ (UBT) ನಾಯಕ ಸಂಜಯ್ ರಾವುತ್ (Sanjay Raut)ಭಾನುವಾರ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ₹2,000 ಕೋಟಿ ಎಂಬುದು ಪ್ರಾಥಮಿಕ ಅಂಕಿ ಅಂಶ ಮತ್ತು ಇದು 100 ಪ್ರತಿಶತ ಸತ್ಯ . ಈ ಬಗ್ಗೆ ನಮ್ಮಲ್ಲಿ ಪುರಾವೆ ಇದೆ. ಅದನ್ನು ಶೀಘ್ರದಲ್ಲೇ ಬಹಿರಂಗಪಡಿಸುವೆ ಎಂದ ಅವರುಡಳಿತಕ್ಕೆ ಹತ್ತಿರವಿರುವ ಬಿಲ್ಡರ್ ತನ್ನೊಂದಿಗೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನಾ ಎಂದು ಭಾರತೀಯ ಚುನಾವಣಾ ಆಯೋಗ (ECI) ಗುರುತಿಸಿದ ರೀತಿ ನ್ಯಾಯವಲ್ಲ ಅದು “ವ್ಯವಹಾರ” ಇದುವರೆಗೆ ಆ ಪ್ರಕರಣದಲ್ಲಿ ₹2,000 ಕೋಟಿ ವ್ಯವಹಾರ ನಡೆದಿದೆ. ಇದು ನನ್ನ ಪ್ರಾಥಮಿಕ ಊಹೆ. ಇದು ನನ್ನ ಎಫ್‌ಐಆರ್. ಈ ನಿರ್ಧಾರವನ್ನು ಖರೀದಿಸಲಾಗಿದೆ ಎಂದು ಹೇಳಿದ್ದಾರೆ.

ಶಾಸಕರೊಬ್ಬರನ್ನು 50 ಕೋಟಿ ರೂ.ಗೆ ಖರೀದಿಸಲು, 100 ಕೋಟಿ ರೂ. ಬಿಡ್‌ ಮಾಡಿ ಸಂಸದರೊಬ್ಬರನ್ನು ಕೊಳ್ಳಲು, 1 ಕೋಟಿ ರೂ. ಬಿಡ್‌ ಮಾಡಿ ನಮ್ಮ ಕೌನ್ಸಿಲರ್‌ ಮತ್ತು ಶಾಖಾ ಪ್ರಮುಖರನ್ನು ಖರೀದಿಸಲು ಮುಂದಾಗಿರುವ ಸರ್ಕಾರ, ನಾಯಕ ಮತ್ತು ನಿರ್ಲಜ್ಜರ ಗುಂಪು, ಪಕ್ಷದ ಚಿಹ್ನೆ ಮತ್ತು ಪಕ್ಷದ ಹೆಸರನ್ನು ಖರೀದಿಸಲು ಅವರು ಎಷ್ಟು ಬಿಡ್ ಮಾಡಬಹುದು ಎಂದು ಊಹಿಸಬಹುದು. ನನ್ನ ಜ್ಞಾನದ ಪ್ರಕಾರ ಇದು 2,000 ಕೋಟಿ ರೂ. ಡೀಲ್ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!