Thursday, March 23, 2023

Latest Posts

ನಿಜ ನಾವು ದಿವಾಳಿಯಾಗಿದ್ದೇವೆ: ಪಾಕ್ ರಕ್ಷಣಾ ಸಚಿವ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟನ್ನು (Pakistan economic crisis) ಎದುರಿಸಲು ಹೆಣಗಾಡುತ್ತಿರುವ ನಡುವೆಯೇಅಲ್ಲಿನ ರಕ್ಷಣಾ ಸಚಿವ ಮಹತ್ವದ ಹೇಳಿಕೆ ನೀಡಿದ್ದಾರೆ.

ಶನಿವಾರ ಸಿಯಾಲ್‌ಕೋಟ್‌ನಲ್ಲಿ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif), ನಾವೀಗ ದಿವಾಳಿಯಾಗಿರುವ ದೇಶದಲ್ಲಿ ವಾಸಿಸುತ್ತಿದ್ದೇವೆ. ಈ ಸ್ಥಿತಿಗೆ ಪ್ರತಿಯೊಬ್ಬರೂ ಕಾರಣರು. ಪಾಕಿಸ್ತಾನದ ಸಮಸ್ಯೆಗೆ ಪಾಕಿಸ್ತಾನವೇ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದಾರೆ.

ಪಾಕಿಸ್ತಾನ ದಿವಾಳಿಯಾಗಿದೆ. ನಾವು ದಿವಾಳಿಯಾಗಿರುವ ದೇಶದಲ್ಲಿ ವಾಸಿಸುತ್ತಿದ್ದೇವೆ. ಪಾಕಿಸ್ತಾನದ ಸಮಸ್ಯೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಬಳಿ ಪರಿಹಾರವಿಲ್ಲ. ನಮ್ಮ ಸಮಸ್ಯೆಗಳಿಗೆ ನಮ್ಮ ದೇಶದೊಳಗೆಯೇ ಪರಿಹಾರವಿದೆ. ಪಾಕಿಸ್ತಾನದಲ್ಲಿ ಕಾನೂನು ಹಾಗೂ ಸಂವಿಧಾನವನ್ನು ಅನುಸರಿಸದಿರುವುದರಿಂದ ಆರ್ಥಿಕ ಅವ್ಯವಸ್ಥೆ ಉಂಟಾಗಿದೆ. ಈ ಪರಿಸ್ಥಿತಿಗೆ ಅಧಿಕಾರಶಾಹಿ ಹಾಗೂ ರಾಜಕಾರಣಿಗಳು ಸೇರಿದಂತೆ ಎಲ್ಲರೂ ಕಾರಣರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದಲ್ಲಿ ಕಳೆದ ವಾರ ಹಣದುಬ್ಬರ ಶೇ.38.4 ಕ್ಕೆ ಏರಿಕೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವುದು ಮುಂದುವರಿಯುತ್ತಿರುವುದರಿಂದ ಒಂದೇ ವಾರದಲ್ಲಿ ಶೇ.38.4 ಕ್ಕೆ ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!