Sunday, December 3, 2023

Latest Posts

2,000 ನೋಟುಗಳ ವಿನಿಮಯವಾಗಿಲ್ಲವೇ?: ಚಿಂತೆ ಬೇಡ ಮತ್ತಷ್ಟು ಕಾಲಾವಕಾಶ ನೀಡಿದೆ RBI

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಜನತೆಗೆ 2,000 ರೂ ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ನೀಡಲಾಗಿದ್ದ ಕಾಲಾವಕಾಶ ಇಂದಿಗೆ ಮುಕ್ತಾಯಗೊಂಡಿದ್ದು, ಈ ಹಿನ್ನೆಲೆ ಇದೀಗ (Deadline) ರಿವರ್ಸ್​ ಬ್ಯಾಂಕ್ (RBI) ಸ್ಪಷ್ಟನೆ ನೀಡಿದ್ದು, 2,000 ರೂ ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಅಕ್ಟೋಬರ್​ 7ವರೆಗೆ ಅವಕಾಶ ನೀಡಲಾಗುವುದು ಎಂದು ಇಂದು (ಸೆ.30) ಹೇಳಿದೆ.

ಈಗಾಗಲೇ ಹಿಂತೆಗೆದುಕೊಳ್ಳುವ ಪ್ರಕ್ರಿಯೆಗೆ ನಿರ್ದಿಷ್ಟಪಡಿಸಿದ ಅವಧಿಯು ಅಂತ್ಯಗೊಂಡಿರುವುದರಿಂದ ಮತ್ತು ಪರಿಶೀಲನೆಯ ಆಧಾರದ ಮೇಲೆ, 2000 ರೂ.ನೋಟುಗಳ ಠೇವಣಿ ಮತ್ತು ವಿನಿಮಯಕ್ಕಾಗಿ ಪ್ರಸ್ತುತ ವ್ಯವಸ್ಥೆಯನ್ನು ಅಕ್ಟೋಬರ್ 07, 2023 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದ” ಎಂದು ಆರ್‌ಬಿಐ ತಿಳಿಸಿದೆ.

ಆರ್‌ಬಿಐ ಪತ್ರಿಕಾ ಪ್ರಕಟಣೆಯ ಪ್ರಕಾರ, ಬ್ಯಾಂಕ್ ಶಾಖೆಗಳಲ್ಲಿ ಠೇವಣಿ ಅಥವಾ ವಿನಿಮಯವನ್ನು ಈಗ ನಿಲ್ಲಿಸಲಾಗುವುದು, ಗ್ರಾಹಕರು ಈ ನೋಟುಗಳನ್ನು 19 ಆರ್‌ಬಿಐ ಸಂಚಿಕೆ ಕಚೇರಿಗಳಲ್ಲಿ ಒಂದು ಸಮಯದಲ್ಲಿ ರೂ 20,000 ವರೆಗೆ ವಿನಿಮಯ ಮಾಡಿಕೊಳ್ಳಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!