ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರಕಾರದ ಮಹಿಳಾ ಮೀಸಲಾತಿ ಕಾನೂನಾಗಿದೆ. ಆದರೆ ಈ ಕಾನೂನಿಗೆ ಮೇಲ್ನೆಟಕ್ಕೆ I.N.D.I.A ಒಕ್ಕೂಟ ಸಮ್ಮತಿ ಸೂಚಿಸಿದರೂ ಒಳಗೊಳಗೆ ಅಸಮಾಧಾನ ಹೊರಹಾಕುತ್ತಿದೆ.
ಈ ಕುರಿತು ಮೈತ್ರಿಯ ಮಿತ್ರ ಪಕ್ಷ,ಲಾಲೂ ಪ್ರಸಾದ್ ಯಾದವ್ ಆಪ್ತ ಆರ್‌ಜೆಡಿ ಹಿರಿಯ ನಾಯಕ ಅಬ್ದುಲ್ ಬಾರಿ ಸಿದ್ದಿಕಿ ಹೇಳಿಕೆ ನೀಡಿದ್ದು, ಈ ಕಾನೂನಿನಿಂದ ಲಿಪ್‌ಸ್ಟಿಕ್ ಮೆತ್ತಿಕೊಂಡ ಮಹಿಳೆಯರು, ಬಾಬ್ ಕಟ್ ಮಾಡಿದ ಹುಡುಗಿಯರು ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ. ಈ ಬಿಲ್ ಮಸೂದೆ ಇಷ್ಟಕ್ಕೆ ಸೀಮಿತ ಎಂದು ಹೇಳಿದ್ದಾರೆ.
ಮುಜಾಫುರ್‌ಪುರ್‌ನಲ್ಲಿ ಆರ್‌ಜೆಡಿ ಪಕ್ಷದ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಸಿದ್ದಿಕಿ, ಬಿಜೆಪಿ ಸರ್ಕಾರ ತರಾತುರಿಯಲ್ಲಿ ಬಿಲ್ ಮಂಡಿಸಿದೆ. ಲೋಕಸಭೆ ಚುನಾವಣೆಯಲ್ಲಿ ಮತಕ್ಕಾಗಿ ಬಿಲ್ ಮಂಡಿಸಲಾಗಿದೆ. ಈ ಬಿಲ್‌ನಿಂದ ಪ್ರಯೋಜವೇನು ಇಲ್ಲ. ಕೇವಲ ಲಿಪ್‌ಸ್ಟಿಕ್, ಬಾಬ್ ಕಟ್ ಹುಡುಗಿಯರು ಕೆಲಸಕ್ಕೆ ಬರ್ತಾರೆ ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಸಿದ್ದಿಕಿ ಯುವ ಸಮೂಹ ವಿದೇಶದಲ್ಲಿ ಅಧ್ಯಯನ ಮಾಡಿ, ವಿದೇಶದಲ್ಲೇ ಕೆಲಸಕ್ಕೆ ಸೇರಿ ಅಲ್ಲೆ ಉಳಿಯಬೇಕು. ಭಾರತಕ್ಕೆ ಹಿಂತಿರುಗಬೇಡಿ ಎಂಬ ಹೇಳಿಕೆ ನೀಡಿದ್ದರು.
ಅಬ್ದುಲ್ ಬಾರಿ ಸಿದ್ದಿಕಿ ಲಾಲೂ ಪ್ರಸಾದ್ ಯಾವದ್ ಅವರ ಆರ್‌ಜೆಡಿ ಪಕ್ಷದ ಹರಿಯ ನಾಯಕ. ಲಾಲೂ ಪ್ರಸಾದ್‌ಗೆ ಆಪ್ತರಾಗಿರುವ ಅಬ್ದುಲ್ ಬಾರಿ ಹೇಳಿಕೆ ಇದೀಗ I.N.D.I.A ಒಕ್ಕೂಟದ ಮಿತ್ರ ಪಕ್ಷಗಳಿಗೆ ತಲೆನೋವಾಗಿದೆ.