Friday, July 1, 2022

Latest Posts

ಐಸಿಸಿ ಅಂಡರ್‌ -19 ವಿಶ್ವ ಕಪ್‌: ಕ್ವಾರ್ಟರ್‌ ಫಿನಾಲೆಗೆ ಲಗ್ಗೆ ಇಟ್ಟ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಐಸಿಸಿ ಅಂಡರ್‌ -19 ವಿಶ್ವ ಕಪ್‌ ಟೂರ್ನಿಯಲ್ಲಿ ಭಾರತದ ಭರ್ಜರಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್‌ ಫೈನಲ್ಸ್‌ ಗೆ ಲಗ್ಗೆ ಇಟ್ಟಿದೆ.
ಶನಿವಾರ ನಡೆದ ಉಗಾಂಡ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 326 ರನ್‌ ಗಳ ಗೆಲುವು ದಾಖಲಿಸಿದೆ.
ಭಾರತದ ರಘುವಂಶಿ 120 ಬಾಲ್‌ ಗಳಲ್ಲಿ 144 ರನ್‌ ಗಳಿಸಿದ್ದು, ಅದರಲ್ಲಿ 22 ಬೌಂಡರಿ, 4 ಸಿಕ್ಸ್‌ ಸಿಡಿಸಿದ್ದಾರೆ. ರಾಜ್‌ ಬಾವಾ 108 ಎಸೆತಗಲ್ಲಿ 162 ರನ್‌ ಪಡೆದು, ಅದರಲ್ಲಿ 14 ಫೋರ್, 8 ಸಿಕ್ಸ್‌ ಪಡೆದಿದ್ದಾರೆ. ಇವರ ಜೊತೆಯಾಟದಿಂದ ಭಾರತದ ಅಂಡರ್‌-19 ತಂಡ ಕ್ವಾಟರ್‌ ಫಿನಾಲೆ ತಲುಪಿದೆ.
ಇನ್ನು ಭಾರತದ ಒಟ್ಟು 406 ರನ್‌ ಗಳ ಗುರಿ ಬೆನ್ನಟ್ಟಿದ ಉಗಾಂಡ, ಬೌಲರ್‌ ಗಳ ಆಟಕ್ಕೆ ಸೋಲೊಪ್ಪಿಕೊಂಡಿತು. ಉಗಾಂಡ 19.4 ಓವರ್‌ ಗಳಲ್ಲಿ ಕೇವಲ 79 ರನ್‌ ಪಡೆದು ಆಲ್‌ ಔಟ್‌ ಆಯಿತು.
ಐಸಿಸಿ ಅಂಡರ್‌ -19 ವಿಶ್ವ ಕಪ್‌ ಟೂರ್ನಿಯ ಬಿ ಗುಂಪಿನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಇನ್ನು ಜ.29ರಂದು ಬಾಂಗ್ಲಾದೇಶದ ವಿರುದ್ಧ ಕ್ವಾರ್ಟರ್‌ ಫಿನಾಲೆಯಲ್ಲಿ ಗೆಲುವಿಗಾಗಿ ಹೋರಾಡಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss