2022ರ ಭಾರತ ಕ್ರಿಕೆಟ್ ಪಯಣ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2021ರ ಭಾರತ ಕ್ರಿಕೆಟ್ ಪಯಣ ಮುಗಿದಿದ್ದು, ಇದೀಗ 2022ರ ಆರಂಭವಾಗಿದೆ. ಈ ವರ್ಷ ಮೂರು ದೊಡ್ಡ ಟೂರ್ನಮೆಂಟ್​ಗಳು ನಡೆಯಲಿದೆ.
ಜನವರಿ-ಫೆಬ್ರವರಿಯಲ್ಲಿ ವೆಸ್ಟ್​ ಇಂಡೀಸ್​ನಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್, ಮಾರ್ಚ್​-ಏಪ್ರಿಲ್​ನಲ್ಲಿ ನ್ಯೂಜಿಲ್ಯಾಂಡ್​ನಲ್ಲಿ ಮಹಿಳಾ ವಿಶ್ವಕಪ್​ ಮತ್ತು ಅಕ್ಟೋಬರ್​-ನವೆಂಬರ್​ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್​ಗಳು 2022ರ ದೊಡ್ಡ ಕ್ರಿಕೆಟ್ ಟೂರ್ನಮೆಂಟ್​ಗಳಾಗಿವೆ.
ಅದಲ್ಲದೆ ಭಾರತ ಹಿರಿಯರ ತಂಡ 2022ರಲ್ಲಿ 11 ಟೆಸ್ಟ್​ ಪಂದ್ಯಗಳನ್ನಾಡಲಿದೆ . ಈಗಾಗಲೇ 1-0ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​ ಸರಣಿ ಮುನ್ನಡೆ ಸಾಧಿಸಿರುವ ಕೊಹ್ಲಿ ಪಡೆ ಮುಂದಿನ 2 ಪಂದ್ಯಗಳಲ್ಲಿ ಗೆಲ್ಲುವ ತವಕದಲ್ಲಿದೆ.
ಇನ್ನು ಭಾರತ ಜನವರಿ 19, 21 ಮತ್ತು 23 ರಂದು 3 ಏಕದಿನ ಪಂದ್ಯಗಳನ್ನಾಡಲಿದೆ. ಆ ಪ್ರವಾಸ ಬಳಿಕ ತವರಿನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಫೆಬ್ರವರಿಯಲ್ಲಿ 6,9 ಮತ್ತು 12ರಂದು ಏಕದಿನ ಮತ್ತು ಫೆಬ್ರವರಿ 15, 18 ಮತ್ತು 20 ರಂದು ಟಿ20 ಸರಣಿಯನ್ನಾಡಲಿದೆ.
ಫೆಬ್ರವರಿ -ಮಾರ್ಚ್​​ನಲ್ಲಿ ಶ್ರೀಲಂಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. 25ರಿಂದ ಮಾರ್ಚ್​1ರ ಮತ್ತು ಮಾರ್ಚ್​ 5ರಿಂದ 9ರವರೆಗೆ 2 ಟೆಸ್ಟ್​ ಪಂದ್ಯ ಮತ್ತು ಮಾರ್ಚ್​ 13,15 ಮತ್ತು 18ರಂದು 3 ಟಿ20 ಪಂದ್ಯಗಳನ್ನಾಡಲಿದೆ. ಬಳಿಕ ಆಫ್ಘಾನಿಸ್ತಾನ ಮಾರ್ಚ್​​ನಲ್ಲಿ 3 ಪಂದ್ಯಗಳ ಏಕದಿನ ಸರಣಿಗಾಗಿ ಭಾರತಕ್ಕೆ ಆಗಮಿಸಲಿದೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಇದರ ನಡುವೆ ಏಪ್ರಿಲ್-ಮೇನಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ ನಡೆಯಲಿದೆ. ಬಳಿಕ ಜೂನ್​ನಲ್ಲಿ ದಕ್ಷಿಣ ಆಫ್ರಿಕಾಗೆ 5 ಟಿ20(ಜೂ9,12, 14, 15, 19) ಸರಣಿಯನ್ನಾಡಲು ಭಾರತ ಪ್ರವಾಸ ಕೈಗೊಳ್ಳಲಿದೆ. ಇದರ ಬಳಿಕ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಕಳೆದ ವರ್ಷ ರದ್ದಾಗಿರುವ ಒಂದು ಟೆಸ್ಟ್​(ಜು1-5)ಜುಲೈ 7, 9 ಮತ್ತು 10ರಂದು ಟಿ20 ಸರಣಿ, ಜುಲೈ 12, 14 ಮತ್ತು 17ರಂದು ಏಕದಿನ ಪಂದ್ಯಗಳನ್ನಾಡಲಿದೆ.
ಜುಲೈ-ಆಗಸ್ಟ್​ನಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಲಿದೆ. ಅಲ್ಲಿಂದ ವಾಪಸ್ ಆದ ನಂತರ ಶ್ರೀಲಾಂಕದಲ್ಲಿ ಸೆಪ್ಟೆಂಬರ್​ನಲ್ಲಿ ಏಷ್ಯಾಕಪ್​ನಲ್ಲಿ ಪಾಲ್ಗೊಳ್ಳಲಿದೆ. ಈ ಎರಡೂ ಸರಣಿಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಸೆಪ್ಟೆಂಬರ್​ನಲ್ಲಿ ಆಸ್ಟ್ರೇಲಿಯಾ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ 4 ಟೆಸ್ಟ್​ ಮತ್ತು 3 ಟಿ20 ಪಂದ್ಯಗಳ ಸರಣಿಯನ್ನಾಡಲಿದೆ. ಅಕ್ಟೋಬರ್​ನಲ್ಲಿ ಭಾರತ ಟಿ20 ವಿಶ್ವಕಪ್​ ಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.
ನವೆಂಬರ್​-ಡಿಸೆಂಬರ್​ನಲ್ಲಿ ಬಾಂಗ್ಲಾದೇಶ ಪ್ರಯಾಣ ಬೆಳೆಸಲಿದ್ದು, ಅಲ್ಲಿ ಭಾರತ 3 ಟೆಸ್ಟ್​ ಮತ್ತು 3 ಏಕದಿನ ಪಂದ್ಯಗಳ ಸರಣಿ ಆಡಲಿದೆ. ಡಿಸೆಂಬರ್​ನಲ್ಲಿ ಶ್ರೀಲಂಕಾ 5 ಪಂದ್ಯಗಳ ಏಕದಿನ ಸರಣಿಯನ್ನಾಡಲು ಭಾರತಕ್ಕೆ ಆಗಮಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!