ಚಲುವರಾಯಸ್ವಾಮಿ-ಬೆಟ್ಟದೊಡಯ ನರಸಿಂಹಸ್ವಾಮಿಯ ದರುಶನ ಪಡೆದ ಸಹಸ್ರಾರು ಸಂಖ್ಯೆಯ ಭಕ್ತರು

ಹೊಸದಿಗಂತ ವರದಿ,ಮೇಲುಕೋಟೆ :

ಹೊಸವರ್ಷದ ಪ್ರಯುಕ್ತ ಶನಿವಾರ ಸಹಸ್ರಾರು ಸಂಖ್ಯೆಯ ಭಕ್ತರು ಮೇಲುಕೋಟೆಗೆ ಆಗಮಿಸಿ ಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದೊಡೆಯ ಯೋಗಾನರಸಿಂಹಸ್ವಾಮಿಯ ದರ್ಶನಪಡೆದರು. ಭಕ್ತಸಾಗರವೇ ಹರಿದು ಬರುತ್ತಿದ್ದ ಕಾರಣ ಇಡೀದಿನ ದೇವಾಲಯಗಳನ್ನು ತೆರೆದು ಭಕ್ತರ ದರ್ಶನಕ್ಕೆ ಅವಕಾಶಮಾಡಿಕೊಡಲಾಗಿತ್ತು
ಬೆಳಿಗ್ಗೆ 5 ಗಂಟೆಗೆ ದೇವಾಲಯ ಆರಂಭವಾಗಿ ಧನುರ್ಮಾಸದ ಪೂಜಾಕೈಂಕರ್ಯಗಳು 6-30ರವೇಳೆಗೆ ಮುಕ್ತಾಯವಾದವು. ಬೆಳಿಗ್ಗೆ 7 ಗಂಟೆಯಿಂದಲೇ ಭಕ್ತರು ದೇವರದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಕುಟುಂಬ ಸಮೇತರಾಗಿ ತಂಡೋಪತಂಡವಾಗಿ ಆಗಮಿಸುತ್ತಿದ್ದ ಭಕ್ತರು ಇಡೀ ವರ್ಷ ನಮ್ಮನ್ನು ಸುಖವಾಗಿಡು ಎಂದು ಪ್ರಾರ್ಥಿಸಿ ಸ್ವಾಮಿಯ ದರ್ಶನ ಮಾಡಿದರು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ ಎರಡೂ ದೇಗುಲದಲ್ಲಿ ಸುಗಮದರ್ಶನಕ್ಕೆಬೇಕಾದ ಎಲ್ಲಾವ್ಯವಸ್ಥೆ ಮಾಡಿದ್ದರು.
144 ಸೆಕ್ಷನ್ ಜಾರಿ: ದೇವಾಲಯಗಳಲ್ಲಿ ದರ್ಶನ ಹೊರತುಪಡಿಸಿದರೆ ಪ್ರವಾಸಿತಾಣಗಳಾದ ಕಲ್ಯಾಣಿ, ಅಕ್ಕತಂಗಿಕೊಳ ರಾಯಗೋಪುರ, ಹಾಗೂ ದನುಷ್ಕೋಟಿಯ ಬಳಿ 144 ಸೆಕ್ಷನ್ ಜಾರಿಗೊಳಿಸಿ ಭಕ್ತರ ಪ್ರವೇಶವನ್ನು ನಿರ್ಭಂದಿಸಲಾಗಿತ್ತು. ಇನ್ಸ್‌ಪೆಕ್ಟರ್ ಸುಮಾರಾಣಿ ನೇತೃತ್ವದಲ್ಲಿ ಎಲ್ಲಾ ಕಡೆ ಪೊಲೀಸ್ ಭದ್ರತೆಮಾಡಲಾಗಿತ್ತು. ಮೇಲುಕೋಟೆಗೆ ಬರುವ ಭಕ್ತರವಾಹನಗಳನ್ನು ಆಸ್ಪತ್ರೆಯಮುಂಭಾಗವೇ ತಡೆದು ಅಲ್ಲೇ ಮೈದಾನದಲ್ಲಿ ಪಾರ್ಕಿಂಗ್ ಮಾಡಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!