ವಿಭಿನ್ನವಾಗಿ ನಡೆಯಲಿದೆ ಈ ಬಾರಿಯ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭ! ಏನು ವಿಶೇಷತೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಸಿದ್ಧ ಆಸ್ಕರ್‌ -2022 ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್‌ ನಲ್ಲಿ ನಡೆಯಲಿದ್ದು, ಈ ಬಾರಿ ಹಲವು ಮೊದಲುಗಳಿದ್ದು, ಇವು ದಾಖಲೆಗಳನ್ನು ಸೃಷ್ಟಿಸಲಿದೆ.
ಆಸ್ಕರ್‌ ಪ್ರಶಸ್ತಿಗೆ ಹಲವು ಖ್ಯಾತ ಚಿತ್ರಗಳು ನಾಮನಿರ್ದೇಶನಗೊಂಡಿದ್ದು, ಈ ಬಾರಿಯ ಪ್ರಶಸ್ತಿ ಸಮಾರಂಭವನ್ನು ನಿರೂಪಕರು ನಡೆಸಿಕೊಡಲಿರುವುದು ವಿಶೇಷವಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಆಸ್ಕರ್‌ ಗೆ ಯಾವುದೇ ನಿರೂಪಕರು ಇರಲಿಲ್ಲ. ಆದರೆ ಈ ಸಲ ಆಸ್ಕರ್‌ ಸಮಾರಂಭದಲ್ಲಿ ನಿರೂಪಕರು ಇರಲಿದ್ದು, ಇದು ಹಲವು ವರ್ಷಗಳ ಕಾರ್ಯಕ್ರಮಗಳಿಗಿಂತ ವಿಶೇಷವಾಗಿ ಮೂಡಿಬರುವ ನಿರೀಕ್ಷೆ ಇದೆ.
1987ರಲ್ಲಿ ಪ್ರಾರಂಭವಾದ ಈ ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈವರೆಗೆ ಕೇವಲ ಮೂರು ನಿರೂಪಕರು ನಿರೂಪಣೆ ಮಾಡಿದ್ದರು. ಆದರೆ ಈಗ ಇತಿಹಾಸದಲ್ಲೇ ಮೊದಲ ಬಾರಿಗೆ ಮೂವರು ನಿರೂಪಕರು ಒಂದೇ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
2022ರ ಆಸ್ಕರ್‌ ಸಮಾರಂಭದಲ್ಲಿ ವಂಡಾ ಸೈಕ್ಸ್, ಆಮಿ ಶುಮ್ಮರ್ ಮತ್ತು ರೆಜಿನಾ ಹಾಲ್ ನಿರೂಪಣೆ ಮಾಡಲಿದ್ದು, ಕಾರ್ಯಕ್ರಮದ ಮೆರುಗು ಹೆಚ್ಚಾಗಲಿದೆ.

2022 Oscars hosts announced on 'GMA'ಮಾ.27ರಂದು 94ನೇ ಆಸ್ಕರ್‌ ಪ್ರಶಸ್ತಿ ಕಾರ್ಯಕ್ರಮ ನಡೆಯಲಿದೆ. ಅಷ್ಟೇ ಅಲ್ಲ ಈ ಬಾರಿ ಜನರನ್ನು ಆಕರ್ಷಿಸಲು ಆಸ್ಕರ್‌ ಹೊಸ ವಿಭಾಗದ ಪ್ರಶಸ್ತಿಯನ್ನು ಘೋಷಿಸಲಿದ್ದು, ಇದರಲ್ಲಿ ಅಭಿಮಾನಿಗಳ ನೆಚ್ಚಿನ ಚಿತ್ರ ಎಂಬ ಪ್ರಶಸ್ತಿಯೂ ಇರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!