ಟಿಕ್‌ಟಾಕ್‌ ಸ್ನೇಹಿತನ ಭೇಟಿಗೆ ಪಾಕ್‌ಗೆ ಹೋದ ಅಮೆರಿಕ ಯುವತಿ ಮೇಲೆ ಗ್ಯಾಂಗ್ ರೇಪ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಟಿಕ್ ಟಾಕ್‌ ಸ್ನೇಹಿತನೊಬ್ಬನ ಭೇಟಿಗಾಗಿ ಆಗಮಿಸಿದ್ದ 21 ವರ್ಷದ ಅಮೆರಿಕ ಯುವತಿಯೊಬ್ಬಳ ಮೇಲೆ ಆಕೆಯ ಪಾಕ್‌ ಸ್ನೇಹಿತ ಹಾಗೂ ಇನ್ನೊಬ್ಬ ವ್ಯಕ್ತಿ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆಸಿದೆ.
ಡಿ.ಜಿ.ಯ ಗಿರಿಧಾಮ ‘ಫೋರ್ಟ್ ಮನ್ರೋ’ ನಲ್ಲಿರುವ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಪಾಕ್‌ ನ ಟಿಕ್‌ ಟಾಕರ್‌ ಮುಜಾಮಿಲ್ ಸಿಪ್ರಾ  ಎಂಬಾತ ಫೇಸ್‌ ಬುಕ್‌ ಮೂಲಕ ಅಮೆರಿಕ ಹುಡುಗಿಗೆ ಪರಿಚಿತನಾಗಿದ್ದ. ಆತನ ಆಹ್ವಾನದ ಮೇರೆಗೆ ಅಮೆರಿಕಾ ಹುಡುಗಿ  ಕರಾಚಿಯಿಂದ ಫೋರ್ಟ್ ಮನ್ರೋಗೆ ಬಂದಿದ್ದಳು. ಲಾಹೋರ್‌ನಿಂದ 550 ಕಿಲೋಮೀಟರ್ ದೂರದಲ್ಲಿರುವ ಪಂಜಾಬ್‌ನ ರಾಜನ್‌ಪುರ ಜಿಲ್ಲೆಯ ಆತನ ಮನೆಗೆ ಭೇಟಿ ನೀಡಿದ್ದಳು.
ಅಲ್ಲಿಂದ ಆಕೆಯನ್ನು ಹೋಟೆಲ್‌ ಒಂದಕ್ಕೆ ಕರೆದೊಯ್ದ ಮುಜಾಮಿಲ್ ಮತ್ತು ಆತನ ಸ್ನೇಹಿತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಫೋರ್ಟ್ ಮನ್ರೋನಲ್ಲಿರುವ ಹೋಟೆಲ್‌ನಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಮತ್ತು ನನ್ನ ಬ್ಲ್ಯಾಕ್‌ಮೇಲ್ ಮಾಡಲು ಕೃತ್ಯದ ವೀಡಿಯೊವನ್ನು ಸಹ ಮಾಡಿದ್ದಾರೆ ಎಂದು ಯುವತಿ ಪೊಲೀಸರಿಗೆ  ದೂರು ನೀಡಿದ್ದಾಳೆ.
ಪಾಕ್‌ ಪೊಲೀಸರು ಈಗಾಗಲೇ ಸಿಪ್ರಾನನ್ನು ಬಂಧಿಸಿದ್ದಾರೆ ಮತ್ತು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಮತ್ತೊಬ್ಬ ವ್ಯಕ್ತಿಗೆ ಹುಡುಕಾಟ ನಡೆಸಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!