ಥೈಲ್ಯಾಂಡ್‌ನಲ್ಲಿ ಜನರ ಮಾರಣ ಹೋಮ: ಗುಂಡಿನ ದಾಳಿಗೆ 22 ಮಕ್ಕಳು ಸೇರಿ 34 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವ್ಯಕ್ತಿಯೊಬ್ಬ ಇಂದು ಮನಬಂದಂತೆ ಗುಂಡು ಹಾರಿಸಿ 34 ಜನರನ್ನು ಬಲಿತೆಗೆದುಕೊಂಡಿರುವ ಘಟನೆ ಥೈಲ್ಯಾಂಡ್‌ನಲ್ಲಿ ನಡೆದಿದೆ. ಬಲಿಯಾದವರಲಲ್ಲಿ 22 ಮಕ್ಕಳಿದ್ದು, ಥಾಯ್ಲೆಂಡ್‌ನ ನೋಂಗ್ ಬುವಾ ಲಾಮ್ ಫು ಪ್ರಾಂತ್ಯದ ಮಕ್ಕಳ ಡೇ ಕೇರ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಜಿ ಪೊಲೀಸ್ ಅಧಿಕಾರಿಯೇ ಈ ದುಷ್ಕೃತ್ಯ ಎಸಗಿರುವುದಾಗಿ ತಿಳಿದಿದೆ. ಕೆಲ ದಿನಗಳ ಹಿಂದೆ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಮೇಲಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಗುಂಡು ಹಾರಿಸುವುದರ ಜೊತೆಗೆ ಕೆಲವರನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ ಎನ್ನಲಾಗಿದೆ. ಈ ಘಟನೆಗೆ ಕಾರಣ ಏನೆಂದು ತಿಳಿದುಬಂದಿಲ್ಲ. ಆರೋಪಿ ಟ್ರಕ್‌ನಲ್ಲಿ ತಿರುಗಾಡುತ್ತಿರುವುದು ಕಂಡು ಬಂದಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಹಲವೆಡೆ ಹೈ ಅಲರ್ಟ್ ಘೋಷಿಸಲಾಗಿದ್ದು, ಆರೋಪಿಗಾಗಿ ಪೊಲೀಸರ ಶೋಧಕಾರ್ಯ ಮುಂದುವರಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!