ಬಾಲ್ಟಿಮೋರ್ ಸೇತುವೆಗೆ ಡಿಕ್ಕಿ ಹೊಡೆದ ಹಡಗಿನಲ್ಲಿದ್ದರು 22 ಮಂದಿ ಭಾರತೀಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ ಸೇತುವೆಗೆ ಸರಕು ಹಡಗು ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ಸೇತುವೆ ಕುಸಿದು ಬಿದ್ದ ಘಟನೆ ನಡೆದಿದೆ.

ಇನ್ನು ಸಿಂಗಾಪೂರ ಮೂಲದ ಈ ಹಡಗನ್ನು ಸಂಪೂರ್ಣ ಭಾರತೀಯ ಸಿಬ್ಬಂದಿಗಳೇ ನಿರ್ವಹಿಸುತ್ತಿದ್ದರು. ಕಬ್ಬಿಣದ ಸೇತುವೆ ಹಡಗಿನ ಮೇಲೆ ಬಿದ್ದ ಪರಿಣಾಮ ಹಡಗು ಮತ್ತಷ್ಟು ನೀರಿನ ಆಳಕ್ಕೆ ಇಳಿದಿದೆ. ಅದೃಷ್ಟವಶಾತ್ ಹಡಗಿನ ಎಲ್ಲಾ 21 ಭಾರತೀಯ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

ಆದರೆ ಸೇತುವೆ ಮೇಲೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳ ಪೈಕಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. 6 ಮಂದಿ ನಾಪತ್ತೆಯಾಗಿದ್ದಾರೆ.

‘ದಾಲಿ’ ಅನ್ನೋ ಹಡಗು ಸರಕು ತುಂಬಿ ಅಮೆರಿಕದ ಬಾಲ್ಟಿಮೋರ್ ಮೂಲಕ ಸಾಗಿತ್ತು. ಈ ವೇಳೆ ಹಡಗಿನಲ್ಲಿ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು,. ಏಕಾಏಕಿ ಹಡಗಿನ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರ ಪರಿಣಾಮ ಹಡಗು ನಿಯಂತ್ರಣ ತಪ್ಪಿ ನೇರವಾಗಿ ಸೇತುಗೆ ಡಿಕ್ಕಿ ಹೊಡೆದಿದೆ.

ಸೇತುವೆಗೆ ಡಿಕ್ಕಿ ಹೊಡೆದ ಬೆನ್ನಲ್ಲೇ ಸಂಪೂರ್ಣ ಸೇತುವೆ ಕುಸಿದು ಬಿದ್ದಿದೆ. ಸೇತುವೆಯ ಒಂದು ಭಾಗ ಹಡಗಿನ ಮೇಲೆ ಬಿದ್ದಿದೆ. ಇದು ಆತಂಕ ಹಚ್ಚಿಸಿತ್ತು. ಆದರೆ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೇರಿಲ್ಯಾಂಡ್ ಗವರ್ನರ್ ವೆಸ್ ಮೂರೆ, ಹಡಗಿನಲ್ಲಿ ವಿದ್ಯುತ್ ಸಮಸ್ಸೆ ಕಾಣಿಸಿಕೊಂಡಿರುವುದ ಪತ್ತೆಯಾಗಿದೆ. ಈ ಕುರಿತು ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ರಕ್ಷಣಾ ತಂಡಗಳು ನೆರವಿಗೆ ಧಾವಿಸಿದೆ. ಸಣ್ಣ ಬೋಟುಗಳ ಮೂಲಕ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ. ಸೇತುವೆ ದುರಸ್ತಿ ಕಾರ್ಯ ಮಾಡುತ್ತಿದ್ದ ಸಿಬ್ಬಂದಿಗಳ ಪೈಕಿ 6 ಮಂದಿ ನಾಪತ್ತೆಯಾಗಿದ್ದಾರೆ. ಹುಡುಕಾಟ ಮುಂದುವರಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!