ಅನಿಲ ಸೋರಿಕೆಯಿಂದ ಹೋಟೆಲ್‌ ಸ್ಫೋಟ; 22 ಜನರ ಸಾವು, 74 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕ್ಯೂಬಾದ ರಾಜಧಾನಿ ಹೃದಯಭಾಗದಲ್ಲಿರುವ ಐಷಾರಾಮಿ ಹೋಟೆಲ್‌ ಸರಟೋಗಾದಲ್ಲಿ ನೈಸರ್ಗಿಕ ಅನಿಲ ಸೋರಿಕೆಯಿಂದ ಉಂಟಾದ ಪ್ರಬಲ ಸ್ಫೋಟದಲ್ಲಿ 22 ಜನರು ಸಾವನ್ನಪ್ಪಿದ್ದಾರೆ.
ಹವಾನಾದ 96 ಕೊಠಡಿಗಳ ಈ ಹೋಟೆಲ್ ನವೀಕರಣಗೊಳ್ಳುತ್ತಿದ್ದ ಕಾರಣದಿಂದ ಯಾವುದೇ ಪ್ರವಾಸಿಗರು ತಂಗಿರಲಿಲ್ಲ. ಇದರಿಂದಾಗಿ ದುರಂತ ತಪ್ಪಿದೆ ಎಂದು ಹವಾನಾ ಗವರ್ನರ್ ರೆನಾಲ್ಡೊ ಗಾರ್ಸಿಯಾ ಜಪಾಟಾ ಅವರು ಮಾಹಿತಿ ನೀಡಿದರು.
ಘಟನೆಯಲ್ಲಿ ಕನಿಷ್ಠ 74 ಜನರು ಗಾಯಗೊಂಡಿದ್ದಾರೆ. ಅವರಲ್ಲಿ 14 ಮಕ್ಕಳು ಸೇರಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಆಸ್ಪತ್ರೆ ಸೇವೆಗಳ ಮುಖ್ಯಸ್ಥ ಡಾ ಜೂಲಿಯೊ ಗುರ್ರಾ ಇಜ್ಕ್ವಿರ್ಡೊ ತಿಳಿಸಿದ್ದಾರೆ.
ಹೋಟೆಲ್‌ಗೆ ನೈಸರ್ಗಿಕ ಅನಿಲವನ್ನು ಪೂರೈಸುತ್ತಿದ್ದ ಟ್ರಕ್‌ನಿಂದ ಸ್ಫೋಟ ಸಂಭವಿಸಿದೆ ಎಂದು ಕ್ಯೂಬಾದ ಸ್ಟೇಟ್ ಟಿವಿ ವರದಿ ಮಾಡಿದೆ, ಆದರೆ ಅನಿಲವು ಹೇಗೆ ಸೋರಿಕೆಯಾಗಿದೆ ಎಂಬುದರ ಕುರಿತು ವಿವರಗಳನ್ನು ನೀಡಿಲ್ಲ. ಅವಶೇಷಗಳಲ್ಲಿ ಸಿಕ್ಕಿಬಿದ್ದಿರುವ ಜನರಿಗಾಗಿ ಹುಡುಕಾಟ ಮುಂದುವರೆದಿದ್ದು, ಗಾಯಗೊಂಡವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!