ನವ ಶೇವಾ ಬಂದರಿನಲ್ಲಿ 1,700 ಕೋಟಿ ರೂ. ಮೌಲ್ಯದ ಲೈಕೋರೈಸ್ ಲೇಪಿತ ಹೆರಾಯಿನ್ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಲೈಕೋರೈಸ್ ಲೇಪಿತ ಸುಮಾರು 22 ಟನ್ ಹೆರಾಯಿನ್ ಕಂಟೈನರ್ ಅನ್ನು ಮುಂಬೈನ ನವ ಶೇವಾ ಬಂದರಿನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸ್ ವಿಶೇಷ ವಿಭಾಗ ತಿಳಿಸಿದೆ. ಪೊಲೀಸರ ಪ್ರಕಾರ, ಇದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 1,725 ​​ಕೋಟಿ ರೂಪಾಯಿ ಮೌಲ್ಯದಷ್ಟಿದೆ ಎಂದಿದ್ದಾರೆ. ಹೆರಾಯಿನ್ ವಶಪಡಿಸಿಕೊಂಡ ದೊಡ್ಡ ಪ್ರಕರಣಗಳಲ್ಲಿ ಇದು ಒಂದಾಗಿದೆ.

ಕಂಟೇನರ್ ಅನ್ನು ದೆಹಲಿಗೆ ಸಾಗಿಸಲಾಗಿದೆ. ನಮ್ಮ ದೇಶದ ಮೇಲೆ ಹೇಗೆ ಮಾದಕವಸ್ತು ಮಾಫಿಯಾ ಮಾರಕ ಎಂಬುದು ಇದರಿಂದ ತಿಳಿಯುತ್ತದೆ. ನಮ್ಮ ದೇಶಕ್ಕೆ ಮಾದಕ ದ್ರವ್ಯಗಳನ್ನು ತಳ್ಳಲು ಅಂತರರಾಷ್ಟ್ರೀಯ ಕಳ್ಳಸಾಗಾಣೆದಾರರು ವಿವಿಧ ವಿಧಾನಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಕೂಡಾ ಸೂಚಿಸುತ್ತದೆ ಎಂದು ವಿಶೇಷ ಸಿಪಿ ಎಚ್‌ಜಿಎಸ್ ಧಲಿವಾಲ್ ಹೇಳಿದರು. ಈ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!