ಹೀರೋ, ಕೆಕೆಆರ್ ಕಂಪನಿಗಳ ಸಹಯೋಗದಲ್ಲಿ ಹೀರೋ ಫ್ಯೂಚರ್‌ ಎನರ್ಜೀಸ್‌ ನಲ್ಲಿ ಹೂಡಿಕೆಯಾಗಲಿದೆ 450 ಮಿಲಿಯನ್‌ ಡಾಲರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಪ್ರಸಿದ್ಧ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾದ ಹಿರೋ ಗ್ರುಪ್‌ ಅಮೆರಿಕದ ಈಕ್ವಿಟಿ ಸಂಸ್ಥೆ ಕೆಕೆಆರ್‌ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ಹಿರೋ ಕಂಪನಿಯ ನವೀಕರಿಸಬಹುದಾದ ಇಂಧನ ವಿಭಾಗವಾದ ಹೀರೋ ಫ್ಯೂಚರ್ ಎನರ್ಜಿಸ್ (HFE) ನಲ್ಲಿ ಸುಮಾರು 450 ಮಿಲಯನ್‌ ಡಾಲರ್‌ (3,600 ಕೋಟಿ ರೂ.) ಹೂಡಿಕೆಯನ್ನು ಘೋಷಿಸಿವೆ ಎಂದು ಬಿಸ್ನೆಸ್‌ ಇನ್‌ಸೈಡರ್‌ ವರದಿ ಮಾಡಿದೆ.

ಹೀರೋ ಫ್ಯೂಚರ್ ಎನರ್ಜಿಸ್ 10 ವರ್ಷದ ಹಿಂದೆ ನವೀಕರಿಸಬಹುದಾದ ಇಂಧನಗಳಿಂದ ವಾಹನತಯಾರಿಕೆಯ ಕುರಿತು ಸಂಶೋಧನೆಗಾಗಿ ಸ್ಥಾಪಿತವಾದ ಕಂಪನಿಯಾಗಿದೆ. ಇದು ಭಾರತ, ಬಾಂಗ್ಲಾದೇಶ, ವಿಯೆಟ್ನಾಂ, ಸಿಂಗಾಪುರ, ಉಕ್ರೇನ್ ಮತ್ತು ಯುಕೆಯಾದ್ಯಂತ ಅಸ್ತಿತ್ವವನ್ನು ಹೊಂದಿದೆ. ಇದು ಸೌರ, ಗಾಳಿ, ಬ್ಯಾಟರಿ ಸಂಗ್ರಹಣೆ ಮತ್ತು ಹಸಿರು ಹೈಡ್ರೋಜನ್‌ನಿಂದ ಹಿಡಿದು ವ್ಯಾಪಕ ಶ್ರೇಣಿಯ ನವೀಕರಿಸಬಹುದಾದ ಶಕ್ತಿ ತಂತ್ರಜ್ಞಾನಗಳನ್ನು ನೀಡುತ್ತದೆ. ಇದು ಪ್ರಸ್ತುತ 1.6 GW ಸೌರ ಮತ್ತು ಪವನ ವಿದ್ಯುತ್ ಯೋಜನೆಗಳನ್ನು ಹೊಂದಿದೆ.

“ಪ್ರಸ್ತುತ ಜಗತ್ತಿನಲ್ಲಿ ಶಕ್ತಿಯ ಬೇಡಿಕೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕಂಪನಿಗಳನ್ನು ಇಂಗಾಲ ಮುಕ್ತಗೊಳಿಸಲು HFE ಯು ಶುದ್ಧ ಶಕ್ತಿ ಪರಿಹಾರಗಳನ್ನು ನೀಡುತ್ತದೆ. ಮುಂದಿನ ಹಂತದ ಬೆಳವಣಿಗೆಯನ್ನು ಸಾಧಿಸಲು ಮತ್ತು ಭಾರತ ಮತ್ತು ಜಾಗತಿಕವಾಗಿ ಶಕ್ತಿ ಪರಿವರ್ತನೆಯ ಪ್ರಯತ್ನಗಳಿಗೆ ಕೊಡುಗೆ ನೀಡಲು HFE ಯ ನಿರ್ವಹಣಾ ತಂಡ ಮತ್ತು ಹೀರೋ ಗ್ರೂಪ್ ಅಸ್ತಿತ್ವದಲ್ಲಿರುವ ಹೂಡಿಕೆದಾರರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದರುರುನೋಡುತ್ತಿದೆ” ಎಂದು KKR ನ ಪಾಲುದಾರ ಹಾರ್ದಿಕ್ ಶಾ ಹೇಳಿದ್ದಾರೆ.

“ಈ ಹೂಡಿಕೆಯೊಂದಿಗೆ, ಹೀರೋ ಫ್ಯೂಚರ್ ಎನರ್ಜಿಗಳು ಭಾರತದ ಶಕ್ತಿಯ ಪರಿವರ್ತನೆಯನ್ನು ವೇಗಗೊಳಿಸಲು ಮತ್ತು 2030 ರ ವೇಳೆಗೆ ಪಳೆಯುಳಿಕೆ ರಹಿತ ಇಂಧನ ಮೂಲಗಳಿಂದ ದೇಶದ ಅರ್ಧದಷ್ಟು ಶಕ್ತಿಯನ್ನು ಉತ್ಪಾದಿಸುವ ಭಾರತ ಸರ್ಕಾರದ ಗುರಿಗೆ ಕೊಡುಗೆ ನೀಡಲು ಕೆಲಸ ಮಾಡುತ್ತದೆ” ಎಂದು HFE ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಮುಂಜಾಲ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!