22ನೇ ಕಾಮನ್​ವೆಲ್ತ್​ ಗೆಮ್ಸ್: ಪಾಕ್ ವಿರುದ್ಧ ಗೆದ್ದು ಪ್ರೀ ಕ್ವಾರ್ಟರ್​ ಫೈನಲ್​ಗೆ ಲಗ್ಗೆ ಇಟ್ಟ ಭಾರತದ ಶಿವಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

22ನೇ ಕಾಮನ್​ವೆಲ್ತ್​ ಗೆಮ್ಸ್​​ನಲ್ಲಿ ಭಾರತ ಶುಭಾರಂಭ ಮಾಡಿದ್ದು, ಇಂದು ನಡೆದ ಮೊದಲ ಪಂದ್ಯದಲ್ಲೇ ಭಾರತದ ಬಾಕ್ಸರ್​ ಶಿವಾ ಥಾಪಾಪಾಕ್ ವಿರುದ್ಧ ಗೆದ್ದು ಪ್ರೀ ಕ್ವಾರ್ಟರ್​ ಫೈನಲ್​ಗೆ ಲಗ್ಗೆ ಹಾಕಿದ್ದಾರೆ.
ಪುರುಷರ 63 ಕೆಜಿ ವಿಭಾಗದ ಬಾಕ್ಸಿಂಗ್​​ನಲ್ಲಿ ಭಾರತದ ಶಿವ ಥಾಪಾ ಪಾಕಿಸ್ತಾನದ ಬಿ ಸುಲೇಮಾನ್ ವಿರುದ್ಧ 5-0 ಅಂತರದಿಂದ ಗೆಲುವು ದಾಖಲು ಮಾಡಿದ್ದು, ಪ್ರೀ ಕ್ವಾರ್ಟರ್​ಫೈನಲ್​ಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಮತ್ತೊಂದೆಡೆ ಟೆಬಲ್​ ಟೆನ್ನಿಸ್ ಡಬಲ್ಸ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಮನಿಕಾ ಬಾತ್ರಾ ಬಳಗ ಗೆಲುವು ದಾಖಲು ಮಾಡಿದ್ದು, ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ.

ಪುರುಷರ 400 ಮೀಟರ್ ಫ್ರೀಸ್ಟೈಲ್ ಈಜು​ ಫೈನಲ್​​ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಭಾರತದ ಕುಶಾಗ್ರಾ ರಾವತ್ ವಿಫಲರಾಗಿದ್ದಾರೆ. ಸೈಕ್ಲಿಂಗ್​ ವಿಭಾಗದಲ್ಲೂ ಭಾರತ ಫೈನಲ್​ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ.ಸ್ವಿಮ್ಮಿಂಗ್​ ವಿಭಾಗದಲ್ಲಿ ಭಾರತದ ಶ್ರೀಹರಿ ನಟರಾಜ್​ ಸೆಮಿಫೈನಲ್​​ಗೆ ಕ್ವಾಲಿಫೈಯರ್​ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!