ಅಕ್ಟೋಬರ್‌ ತಿಂಗಳ ನೇರತೆರಿಗೆ ಸಂಗ್ರಹದಲ್ಲಿ 23.8 ಶೇ.ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಅಕ್ಟೋಬರ್‌ ತಿಂಗಳಿನ ನೇರ ತೆರಿಗೆ ಸಂಗ್ರಹವು 8.98 ಕೋಟಿ ರೂ.ಗಳಷ್ಟಿದ್ದು ಇದು ಕಳೆದವರ್ಷ ಇದೇ ಅವಧಿಗೆ ಹೋಲಿಸಿದರೆ 23.8 ಶೇಕಡಾದಷ್ಟು ಹೆಚ್ಚಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ನೇರ ತೆರಿಗೆ ಸಂಗ್ರಹ, ಮರುಪಾವತಿಯ ನಿವ್ವಳವು 7.45 ಲಕ್ಷ ಕೋಟಿ ರೂ.ಗಳಷ್ಟಿದ್ದು ಇದು ಕಳೆದ ವರ್ಷದ ಇದೇ ಅವಧಿಯ ನಿವ್ವಳ ಸಂಗ್ರಹಕ್ಕಿಂತ 16.3 ಶೇಕಡಾ ಹೆಚ್ಚಾಗಿದೆ. ಈ ಸಂಗ್ರಹಣೆಯು 2022-23ರ ನೇರ ತೆರಿಗೆಗಳ ಒಟ್ಟು ಬಜೆಟ್ ಅಂದಾಜುಗಳ ಶೇಕಡಾ 52.46 ರಷ್ಟಾಗಿದೆ.

ಏಪ್ರಿಲ್ 1 ಮತ್ತು ಅಕ್ಟೋಬರ್ 8 ರ ನಡುವೆ 1.53 ಲಕ್ಷ ಕೋಟಿ ರೂಪಾಯಿ ಮೊತ್ತದ ಮರುಪಾವತಿಗಳನ್ನು ನೀಡಲಾಗಿದೆ, ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ನೀಡಲಾದ ಮರುಪಾವತಿಗಿಂತ 81 ಶೇಕಡಾ ಹೆಚ್ಚಾಗಿದೆ.

ಒಟ್ಟು ಆದಾಯ ಸಂಗ್ರಹಣೆಗಳ ವಿಷಯದಲ್ಲಿ ಕಾರ್ಪೊರೇಟ್ ಆದಾಯ ತೆರಿಗೆ (CIT) ಯ ಬೆಳವಣಿಗೆಯ ದರವು 16.73 ಶೇಕಡಾ ದಷ್ಟಾಗಿದೆ, ಆದರೆ ವೈಯಕ್ತಿಕ ಆದಾಯ ತೆರಿಗೆ (PIT) ಬೆಳವಣಿಗೆಯ ದರವು 32.30 ಶೇ. ದಷ್ಟು ದಾಖಲಾಗಿದೆ. ಮರುಪಾವತಿಗಳ ಹೊಂದಾಣಿಕೆಯ ನಂತರ, CIT ಸಂಗ್ರಹಣೆಗಳಲ್ಲಿನ ನಿವ್ವಳ ಬೆಳವಣಿಗೆಯು 16.29 ಪ್ರತಿಶತ ಮತ್ತು PIT ಸಂಗ್ರಹಣೆಗಳಲ್ಲಿ 17.35 ಪ್ರತಿಶತದಷ್ಟಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!