ಕಾರಾಗೃಹದ 23 ಕೈದಿಗಳಿಗೆ ಹೆಚ್​ಐವಿ ಪಾಸಿಟಿವ್: ಸೋಂಕಿನ ಮೂಲ ನಿಗೂಢ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರಪ್ರದೇಶದ ಸಹರಾನ್​ಪುರ ಜಿಲ್ಲಾ ಕಾರಾಗೃಹದ 23 ಕೈದಿಗಳಿಗೆ ಹೆಚ್​ಐವಿ ಸೋಂಕು ತಗುಲಿದೆ. ಈ ಕುರಿತು ಆರೋಗ್ಯ ಇಲಾಖೆ ದೃಢಪಡಿಸಿದ್ದು, ಜೈಲು ಅಧಿಕಾರಿಗಳನ್ನು ಕಂಗೆಡಿಸಿದೆ.
ಇದೀಗ ಸೋಂಕಿನ ಮೂಲದ ಬಗ್ಗೆ ಪತ್ತೆ ಮಾಡಲು ಆದೇಶಿಸಲಾಗಿದ್ದುರಾಜ್ಯ ಸರ್ಕಾರಕ್ಕೂ ಮಾಹಿತಿ ರವಾನಿಸಲಾಗಿದೆ.
ಜೂನ್ 15 ರಂದು ಸಹರಾನ್‌ಪುರ ಜಿಲ್ಲಾ ಕಾರಾಗೃಹದಲ್ಲಿ ಒಂದು ವಾರ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಈ ವೇಳೆ, ನಡೆಸಿದ ತಪಾಸಣೆಯಲ್ಲಿ ಕೈದಿಗಳಿಗೆ ಏಡ್ಸ್​ ಇರುವುದು ಗೊತ್ತಾಗಿದೆ. ಸೋಂಕಿತ ಕೈದಿಗಳಿಗೆ ಅಗತ್ಯ ಚಿಕಿತ್ಸೆ ನೀಡುವುದರ ಜೊತೆಗೆ, ಕಾರಾಗೃಹದಲ್ಲಿರುವ 2200 ಕೈದಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ.
23 ಖೈದಿಗಳಿಗೆ ಹೆಚ್​ಐವಿ ಪಾಸಿಟಿವ್ ಕಂಡು ಬಂದಿದ್ದರಲ್ಲಿ ಹೆಚ್ಚಿನ ಖೈದಿಗಳು ಬೆಹತ್, ಗಂಗೋಹ್, ನಕುದ್ ಮತ್ತು ದಿಯೋಬಂದ್‌ನಿಂದ ಬಂದವರಾಗಿದ್ದು, ಆರೋಗ್ಯ ಇಲಾಖೆ ಅವರ ಹಿನ್ನೆಲೆಯನ್ನು ಸಂಗ್ರಹಿಸುತ್ತಿದೆ.
ಎಚ್‌ಐವಿ ಪಾಸಿಟಿವ್‌ ಬಂದ 23 ಕೈದಿಗಳ ಪೈಕಿ 6 ಮಂದಿ ಹೊಸಬರಾಗಿದ್ದಾರೆ. ಉಳಿದವರು ಹಳೆಯ ಕೈದಿಗಳು. ಅವರಲ್ಲಿ ಹೆಚ್ಚಿನವರು ಡ್ರಗ್ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಸೋಂಕು ತಗುಲಿದ ಬಗ್ಗೆ ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ಜೈಲು ಅಧೀಕ್ಷಕಿ ಅನಿತಾ ದುಬೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!