ಹೊಸದಿಗಂತ ಡಿಜಿಟಲ್ ಡೆಸ್ಕ್:
IPL 2026ರಿಂದ ಪಂಜಾಬ್ ಕಿಂಗ್ಸ್ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ತಂಡದ ವೇಗಿ ಅರ್ಷದೀಪ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ದಿಢೀರ್ ಬದಲಾವಣೆಗಳು ಭಾರೀ ಚರ್ಚೆಗೆ ಕಾರಣವಾಗಿವೆ.
ಇನ್‌ಸ್ಟಾಗ್ರಾಮ್ ಖಾತೆಯಿಂದ ಪಂಜಾಬ್ ಕಿಂಗ್ಸ್ ಹೆಸರನ್ನು ತೆಗೆದುಹಾಕಿದ ಅರ್ಷದೀಪ್, ಏಕಕಾಲಕ್ಕೆ 234 ಪೋಸ್ಟ್‌ಗಳನ್ನು ಡಿಲೀಟ್ ಅಥವಾ ಆರ್ಕೈವ್ ಮಾಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಒಂದೇ ರಾತ್ರಿ ಬದಲಾಗಿದೆ ಅರ್ಷದೀಪ್ ಪ್ರೊಫೈಲ್
ಮೊದಲು ಇದ್ದ ಹಲವು ಫೋಟೋಗಳು ಮತ್ತು ವಿಡಿಯೋಗಳು ಈಗ ಕಾಣಿಸದಂತಾಗಿವೆ. ಜೊತೆಗೆ ಡಿಪಿ ಬದಲಾಯಿಸಿರುವ ಅರ್ಷದೀಪ್, ತಮ್ಮ ಬಯೋದಲ್ಲಿದ್ದ ಪ್ರಮುಖ ಮಾಹಿತಿಗಳನ್ನೂ ರಿಮೂವ್ ಮಾಡಿದ್ದಾರೆ.
ವಿಡಿಯೋ ವಿವಾದಗಳ ಬಳಿಕ ಈ ನಿರ್ಧಾರವೇ?
ಐಪಿಎಲ್ ವೇಳೆ ಹಂಚಿಕೊಂಡ ಕೆಲವು ವಿಡಿಯೋಗಳಿಂದ ಅರ್ಷದೀಪ್ ಟೀಕೆಗೆ ಗುರಿಯಾಗಿದ್ದರು. ತಿಲಕ್ ವರ್ಮಾ ಕುರಿತು ಮಾಡಿದ್ದ ಕಾಮೆಂಟ್ ಹಾಗೂ ತಂಡದ ಆಟಗಾರರನ್ನು ಅಣಕಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವಿವಾದ ಹುಟ್ಟುಹಾಕಿದ್ದವು.
ಇದನ್ನೂ ಓದಿ:
ಮೈದಾನಕ್ಕಿಂತ ಹೆಚ್ಚು ವೈರಲ್ ಆದ ವಿಡಿಯೋಗಳು
ಯುಜ್ವೇಂದ್ರ ಚಹಲ್ ಕಾಣಿಸಿಕೊಂಡಿದ್ದ ಮತ್ತೊಂದು ವಿಡಿಯೋ ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಪಂದ್ಯ ಪ್ರದರ್ಶನಕ್ಕಿಂತ ಹೆಚ್ಚಾಗಿ ಅರ್ಷದೀಪ್ ಸಾಮಾಜಿಕ ಜಾಲತಾಣದಲ್ಲೇ ಸುದ್ದಿಯಾಗಿದ್ದರು.
ಈ ಸೀಸನ್‌ನಲ್ಲಿ 14 ಪಂದ್ಯಗಳಿಂದ ಕೇವಲ 14 ವಿಕೆಟ್ ಪಡೆದ ಅರ್ಷದೀಪ್ ನಿರೀಕ್ಷಿತ ಮ್ಯಾಜಿಕ್ ತೋರಲಿಲ್ಲ. ಇದೀಗ ಅವರ ಸೋಷಿಯಲ್ ಮೀಡಿಯಾ ‘ಕ್ಲೀನ್‌ಅಪ್’ ಮುಂದಿನ ಸೀಸನ್ ಭವಿಷ್ಯದ ಬಗ್ಗೆ ಹೊಸ ಪ್ರಶ್ನೆ ಹುಟ್ಟಿಸಿದೆ.



