ಎರಡು ತಿಂಗಳ ಬಳಿಕ 24 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಗಾಜಾ-ಇಸ್ರೇಲ್ ಯುದ್ಧ ಪ್ರಾರಂಭವಾಗಿ ಎರಡು ತಿಂಗಳ ಬಳಿಕ ತಮ್ಮ ಬಳಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ 24 ಜನರನ್ನು ಹಮಾಸ್‌ ಬಿಡುಗಡೆ ಮಾಡಿದೆ. ಇಸ್ರೇಲ್‌ನೊಂದಿಗೆ ಕತಾರ್ ಮಧ್ಯಸ್ಥಿಕೆಯ ಒಪ್ಪಂದದಲ್ಲಿ ಹಮಾಸ್ ಶನಿವಾರ 24 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತು. ವೈದ್ಯಕೀಯ ಪರೀಕ್ಷೆ ಬಳಿಕವೇ ಬಿಡುಗಡೆಯಾದವರು ತಮ್ಮವರನ್ನು ಸೇರುತ್ತಾರೆ ಎಂದು ಇಸ್ರೇಲಿ ಸೇನೆ ಹೇಳಿದೆ.

ಇಸ್ರೇಲ್‌ಗೆ ಆಗಮಿಸಿದ ಒತ್ತೆಯಾಳುಗಳಲ್ಲಿ ನಾಲ್ವರು ಮಕ್ಕಳು ಮತ್ತು ಆರು ವೃದ್ಧ ಮಹಿಳೆಯರು ಸೇರಿದ್ದಾರೆ ಎಂದು ಇಸ್ರೇಲ್‌ನ ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಪಟ್ಟಿ ಬಹಿರಂಗಪಡಿಸಿದೆ.

24 ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡುತ್ತಿದ್ದಂತೆ, ಇತ್ತ ಇಸ್ರೇಲ್ ತನ್ನ ಜೈಲುಗಳಿಂದ 39 ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಿರುವುದಾಗಿ ಕತಾರ್ ಆಡಳಿತ ದೃಢಪಡಿಸಿದೆ. ಹಮಾಸ್ ಬಿಡುಗಡೆ ಮಾಡಿದ ಒತ್ತೆಯಾಳುಗಳಲ್ಲಿ 10ಮಂದಿ ಥಾಯ್ ಪ್ರಜೆಗಳು ಮತ್ತು 10 ಫಿಲಿಪಿನೋ ಪ್ರಜೆಗಳಿ ಇದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್ ಅನ್ಸಾರಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!