ದಿನಭವಿಷ್ಯ| ಕೆಲವು ಬೆಳವಣಿಗೆ ಚಿಂತೆಗೆ ಕಾರಣವಾದರೂ ಬಳಿಕ ಸರಿಯಾಗುವುದು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಗೊಂದಲದ ಮನಸ್ಥಿತಿ. ಯಾವ ಕಾರ್ಯವೂ ಸುಲಲಿತವಾಗಿ ಸಾಗುತ್ತಿಲ್ಲ ಎಂಬ ಚಿಂತೆ. ಕೆಲವರ ಅಸಹಕಾರ ಮನದ ಬೇಗುದಿ ಹೆಚ್ಚಿಸುವುದು.

ವೃಷಭ
ಯಾವುದೋ ವಿಷಯ ಅಸಮಾಧಾನಕ್ಕೆ ಕಾರಣವಾಗುವುದು. ಕೆಲವರ ಕುರಿತಂತೆ ವೈರ ಮೂಡಬಹುದು. ಶಾಂತಚಿತ್ತರಾಗಿ ಆಲೋಚಿಸಿರಿ.

ಮಿಥುನ
ಕೆಲವು ಬೆಳವಣಿಗೆ ಚಿಂತೆಗೆ ಕಾರಣವಾದರೂ  ಆತ್ಮೀಯರ ಸಹಕಾರದಿಂದ ಬಳಿಕ ಸರಿಯಾಗುವುದು. ಆರ್ಥಿಕ ಪ್ರಗತಿ, ಪದೋನ್ನತಿ.

ಕಟಕ
ವೃತ್ತಿಯಲ್ಲಿ ನೀವು ಬಯಸಿದ ಬೆಳವಣಿಗೆ. ಮನಸ್ತಾಪದಿಂದ  ದೂರವಾದವರು ತಾವಾಗಿ ಸಮೀಪವಾಗುವರು. ಬಂಧುತ್ವ ವೃದ್ಧಿ.

ಸಿಂಹ
ವೃತ್ತಿಯಲ್ಲಿ ಅಡ್ಡಿಗಳು, ನಿರಾಶೆ. ಸಹೋದ್ಯೋಗಿ ಜತೆ ಹೊಂದಾಣಿಕೆಯ ಕೊರತೆ. ಸಂಗಾತಿ ಜತೆಗೆ ಭಿನ್ನಮತ. ಹಣಕಾಸು ತೊಂದರೆ. ಒಟ್ಟಿನಲ್ಲಿ ಅಪ್ರಿಯ ದಿನವಿದು.

ಕನ್ಯಾ
ಸರಿಯಾದ ಯೋಜನೆ ಇಲ್ಲದಿದ್ದರೆ ನಿಮ್ಮ ಕೆಲಸ ಕೆಟ್ಟೀತು. ಕುಟುಂಬ ಸದಸ್ಯರ ಜತೆ ಹೊಂದಾಣಿಕೆ ಇಲ್ಲದಿದ್ದರೆ ಗೊಂದಲ, ವೈಮನಸ್ಯ ಸಂಭವ.

ತುಲಾ
ವೃತ್ತಿಯಲ್ಲಿ ಸಾಧಾರಣ ಯಶಸ್ಸು. ಉದ್ಯೋಗದ ಒತ್ತಡ ಹೆಚ್ಚು. ಸಹೋದ್ಯೋಗಿ ಜತೆ ವಿರಸ. ಹಣದ ವ್ಯವಹಾರದಲ್ಲಿ  ಹೆಚ್ಚು ಎಚ್ಚರ ವಹಿಸಿರಿ.

ವೃಶ್ಚಿಕ
ಕಾರ್ಯ ಸಿದ್ಧಿಗೆ ಹೆಚ್ಚು ಶ್ರಮ ಪಡಬೇಕು. ಆದರೂ ಕಾರ್ಯ ಸಂಪೂರ್ಣವಾಗದು. ಆತ್ಮೀಯ ಸಂಬಂಧದಲ್ಲಿ ಅಪಸ್ವರ. ಎಚ್ಚರಿಕೆ ಯಿಂದ ನಿಭಾಯಿಸಿ.

ಧನು
ಕೆಲಸದ ಒತ್ತಡ ಅಧಿಕ. ಸಂಗಾತಿ ಜತೆಗಿನ ನಡೆನುಡಿಯಲ್ಲಿ ಎಚ್ಚರವಿರಲಿ. ತಪ್ಪರ್ಥ ಮೂಡದಂತೆ ಎಚ್ಚರ ವಹಿಸಿ. ಸಂಘರ್ಷ ಉಂಟಾದೀತು.

ಮಕರ
ಇತರರು ಮಾಡುವ ತಪ್ಪಿಗೆ ನೀವು ತಲೆ ಕೊಡಬೇಕಾಗುವುದು. ಆತ್ಮೀಯರ ಜತೆ ಜಗಳವಾದೀತು. ಖರ್ಚಿನ ಮೇಲೆ ನಿಗಾ ಇಡಬೇಕು.

ಕುಂಭ
ಮನೆಯಲ್ಲೂ, ವೃತ್ತಿಯಲ್ಲೂ ಹೆಚ್ಚುವರಿ ಹೊಣೆಗಾರಿಕೆ. ನೆಗೆಟಿವ್ ಚಿಂತನೆಗಳು ಮನಸ್ಸನ್ನು ಕಾಡಬಹುದು. ಆರ್ಥಿಕ ಪ್ರಗತಿ ಸಮಾಧಾನ ತರಲಾರದು.

ಮೀನ
ನಿಮ್ಮ ನಿರ್ವಹಣೆ ನಿಮಗೇ ತೃಪ್ತಿ ತರುವುದಿಲ್ಲ. ಇನ್ನೇನೋ ಹೆಚ್ಚಿನದ್ದನ್ನು ಅಪೇಕ್ಷಿಸುವಿರಿ. ಇತರರ ಜತೆಗೆ ಹೊಂದಾಣಿಕೆಯ ಕೊರತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!