ದಿನಭವಿಷ್ಯ | ಬದುಕಿನ ಸಣ್ಣ ಬದಲಾವಣೆ ಸಹ ಎಷ್ಟು ಸಂತೋಷ ತರಬಲ್ಲುದು ಎಂಬುದನ್ನು ಇಂದು ಅರಿಯುವಿರಿ


ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮೇಷ
ನೀವು ಮಾಡುವ ಕೆಲಸದಲ್ಲಿ ಭಾವನಾತ್ಮಕವಾಗಿ ತೊಡಗಿ. ನಿಮ್ಮನ್ನು ಗಣಿಸದ ವ್ಯಕ್ತಿಗಳ ಕುರಿತಂತೆ ನೀವೂ ತಲೆಕೆಡಿಸಿಕೊಳ್ಳದಿರಿ.

ವೃಷಭ
ನಿಮ್ಮನ್ನು ಪ್ರೀತಿಸುವವರ ಕುರಿತಂತೆ ಚಿಂತಿಸಿ ಕಾರ್ಯವೆಸಗಿ. ನಿಮ್ಮ ಟೀಕಾಕಾರರಿಗೆ ಆದ್ಯತೆ ಕೊಡಬೇಡಿ. ಅನವಶ್ಯ ಖರ್ಚುಗಳನ್ನು ನಿಯಂತ್ರಿಸಿರಿ.

ಮಿಥುನ
ನಿಮ್ಮ ಬದುಕಲ್ಲಿ ಮಾಡುವ ಸಣ್ಣ ಬದಲಾವಣೆ ಕೂಡಾ ಎಷ್ಟು ಸಂತೋಷ ತರಬಲ್ಲುದು ಎಂಬುದನ್ನು ಇಂದು ಅರಿಯುವಿರಿ.

ಕಟಕ
ನಿಮ್ಮ ಜತೆಗೇ ಇರುವ ವ್ಯಕ್ತಿಯೊಬ್ಬರ ಮಹತ್ವ ಇಂದು ಅರಿವಾಗಲಿದೆ. ಅವರನ್ನು ಹೊಸ ದೃಷ್ಟಿಕೋನದಲ್ಲಿ ನೋಡುವ ಸಾಧ್ಯತೆ. ಬಂಧುತ್ವ ವೃದ್ಧಿ.

ಸಿಂಹ
ಸಂಬಂಧದ ವಿಚಾರದಲ್ಲಿ ಇಂದು ನಿಮ್ಮ ಬದುಕಿಗೆ ದೊಡ್ಡ ತಿರುವು ಒದಗಬಹುದು. ನಿಮ್ಮ ಭಾವನೆಯನ್ನು ಅಭಿವ್ಯಕ್ತಗೊಳಿಸು ಅವಕಾಶ ಲಭ್ಯ.

ಕನ್ಯಾ
ವೃತ್ತಿ ಕ್ಷೇತ್ರದಲ್ಲಿ ನೀವು ಕೈಗೊಳ್ಳುವ ಪ್ರಮುಖ ನಿರ್ಧಾರ ನಿಮ್ಮ ಒತ್ತಡವನ್ನು ಕಡಿಮೆ ಮಾಡಲಿದೆ. ಟೀಕೆಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದಿರಿ.

ತುಲಾ
ಎಂದಿಗಿಂತ ಹೆಚ್ಚು ಗಂಭೀರವಾಗಿ ವರ್ತಿಸುವಿರಿ. ಕೆಲವು ಅನಿರೀಕ್ಷಿತ ಬೆಳವಣಿಗೆ ಅದಕ್ಕೆ ಕಾರಣ. ವೃತ್ತಿಯಲ್ಲಿ ಹೆಚ್ಚು ಒತ್ತಡ, ಆತಂಕ.

ವೃಶ್ಚಿಕ
ಕೆಲಸದ ಜಾಗದಲ್ಲಿ ನಿಮಗೆ ಕೆಡುಕು ಬಯಸುವ ಮಂದಿ ಯಿದ್ದಾರೆ. ಅವರ ಕುರಿತು ಎಚ್ಚರದಿಂದಿರಿ. ಹಿರಿಯರ ಜತೆ ವಾಗ್ವಾದ ಸಂಭವ, ತಾಳ್ಮೆ ಒಳಿತು.

ಧನು
ಸರಿಯಾಗಿ ವಿವೇಚಿಸಿ ನಿರ್ಧಾರ ತಾಳಿರಿ. ವೃತ್ತಿಯಲ್ಲಿನ ಒತ್ತಡವು ಆರೋಗ್ಯದ ಮೇಲೆ ಪರಿಣಾಮ ಬೀರೀತು. ದೇಹಾಲಸ್ಯ ಬಾಧಿಸುವುದು.

ಮಕರ
ಕಳೆದ ಕೆಲವು ದಿನಗಳ ಗೊಂದಲವು ಇಂದು  ಪರಿಹಾರ ಕಾಣುವುದು.  ಯಾವುದೂ ಅಸಾಧ್ಯವಲ್ಲ ಎಂಬ ಅರಿವು ನಿಮಗೆ ಆಗಲಿದೆ. ಆರ್ಥಿಕ ಉನ್ನತಿ.

ಕುಂಭ
ಆಪ್ತರ ಜತೆಗಿನ ಸಂಬಂಧವನ್ನು ನಾಜೂಕಾಗಿ ನಿಭಾಯಿಸಿ. ಇಲ್ಲವಾದರೆ ಬಿರುಕು ಸಂಭವ.  ಮನ ನೋಯಿಸಲು ಹೋಗದಿರಿ.

ಮೀನ
ಅನಿರೀಕ್ಷಿತ ಕಾರ್ಯದೊತ್ತಡ. ಚಿಂತೆ ಬೇಡ, ನೀವು ಅದನ್ನು ಚೆನ್ನಾಗಿ ನಿಭಾಯಿಸುವಿರಿ. ಚರ್ಮದ ಅಲರ್ಜಿ ಕಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!