Corona update | ದೇಶದಲ್ಲಿ 243 ಹೊಸ ಕೋವಿಡ್ ಸೋಂಕು; ಸಕ್ರಿಯ ಪ್ರಕರಣಗಳ ಸಂಖ್ಯೆ 3,609 ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಭಾರತದಲ್ಲಿ‌ ಕಳೆದ 24 ಗಂಟೆಯಲ್ಲಿ 243 ಹೊಸ ಕರೋನ ವೈರಸ್ ಸೋಂಕುಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳು 3,609 ಕ್ಕೆ ಏರಿದೆ ಎಂದು ಶುಕ್ರವಾರ ನವೀಕರಿಸಲಾದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4,46,78, 158 ಕ್ಕೆ ಏರಿಕೆಯಾಗಿದೆ. ಮತ್ತು ಸಾವಿನ ಸಂಖ್ಯೆ 5,30,699 ರಷ್ಟಿದೆ ಮತ್ತು ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಿಂದ ಒಂದು ಸಾವು ವರದಿಯಾಗಿದೆ ಎಂದು ವರದಿ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಕೋವಿಡ್ ಪತ್ತೆಗಾಗಿ 2,13,080 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್ ಕೇಸ್‌ಲೋಡ್‌ನಲ್ಲಿ 57 ಪ್ರಕರಣಗಳ ಹೆಚ್ಚಳ ದಾಖಲಾಗಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,41,43,850 ಕ್ಕೆ ಏರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!