Friday, June 2, 2023

Latest Posts

25 ದೇಶದ ಚುನಾವಣೆಗೆ ಶಾಯಿ ಪೂರೈಸುವುದು ಕರ್ನಾಟಕ, ಇಲ್ಲಿ ತಯಾರಾಗುತ್ತದೆ ಇಂಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀವು ಮತದಾನ ಮಾಡಿದ್ದೀರಿ ಎಂದು ಇತರರು ತಿಳಿಯುವುದು ಹೇಗೆ? ನಿಮ್ಮ ಮತದಾನದಿಂದ ಜಾಗೃತರಾಗಿ ಇನ್ನೊಬ್ಬರು ಮತದಾನ ಮಾಡುವುದು ಹೇಗೆ? ಕೈ ಬೆರಳಿನ ಇಂಕ್‌ನಿಂದ ಅಲ್ವಾ? ಶಾಯಿಯ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ, ನಾವು ಮತದಾನ ಮಾಡಿದ್ದೇವೆ ನೀವು? ಎನ್ನುವ ಪ್ರಶ್ನೆಯಿಡುತ್ತೀರಿ!

Karnataka polls: EC puts interim voter turnout at 70 per cent - The  Statesmanಮತದಾನ ಮಾಡಿದ ಮತದಾರರಿಗೆ ಹಚ್ಚುವ ಕಪ್ಪು ಶಾಯಿ ಎಲ್ಲಿ ತಯಾರಾಗುತ್ತದೆ ಗೊತ್ತಾ? ಇದು ತಯಾರಾಗುವುದು ನಮ್ಮ ಕರ್ನಾಟಕದಲ್ಲಿ, ನಮ್ಮ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ.

What is indelible ink? - The Hinduದೇಶದ ಎಲ್ಲೇ ಚುನಾವಣೆ ನಡೆದರೂ ಶಾಯಿ ರವಾನೆಯಾಗುವುದು ಮೈಸೂರಿನಿಂದಲೇ, ನಾಳೆ ನಡೆಯುವ ವಿಧಾನಸಭಾ ಚುನಾವಣೆಗೆ ಮೈಸೂರಿನಿಂದ ಈಗಾಗಲೇ ಇಂಕ್ ರವಾನೆಯಾಗಿದೆ. ಚುನಾವಣಾ ಆಯೋಗದ ಬೇಡಿಕೆಯಂತೆ ಒಂದು ಲಕ್ಷದ 20 ಸಾವಿರ ಸಾವಿರ ಬಾಟೆಲ್‌ಗಳನ್ನು ಪೂರೈಕೆ ಮಾಡಲಾಗಿದೆ.

ಮೈಸೂರು ವಿಶೇಷ; ಪಂಚ ರಾಜ್ಯಗಳ ಚುನಾವಣೆ; ಮೈಲಾಕ್‌ನಿಂದ ಶಾಯಿ ಪೂರೈಕೆ | Mysore MyLac  company to supply 5 lakh indelible ink bottles to 5 states elections -  Kannada Oneindiaಎಲ್ಲಿ ತಯಾರಾಗುತ್ತದೆ?
ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆಯಲ್ಲಿ ಚುನಾವಣಾ ಶಾಯಿ ತಯಾರಾಗುತ್ತದೆ. ಈ ಕಾರ್ಖಾನೆಗೆ ವಿದೇಶಗಳಲ್ಲಿಯೂ ಖ್ಯಾತಿ ಇದೆ, ಹಾಗಿದೆ ಅದರ ಗುಣಮಟ್ಟ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1937ರಲ್ಲಿ ಈ ಕಾರ್ಖಾನೆಯನ್ನು ಆರಂಭಿಸಿದ್ದರು. ಸ್ವಾತಂತ್ರ್ಯ ನಂತರ ಆದ ಎಲ್ಲ ಚುನಾವಣೆಗೂ ಇಲ್ಲಿಂದಲೇ ಶಾಯಿ ರವಾನೆ ಮಾಡಲಾಗುತ್ತದೆ.

800 ಮತದಾರರು
ಒಮ್ಮೆ ಮಸಿ ಕೈಗೆ ಬಿದ್ದರೆ ಕನಿಷ್ಟ 48 ಗಂಟೆಗಳಿಂದ 30 ದಿನದವರೆಗೂ ಇದನ್ನು ಅಳಿಸಲು ಆಗುವುದಿಲ್ಲ. ಒಂದು ಬಾಟಲ್‌ನಿಂದ 800 ಮತದಾರರ ಕೈಗೆ ಗುರುತು ಹಾಕಬಹುದು.

25 ದೇಶಗಳಿಗೆ ರವಾನೆ
ಈ ಕಪ್ಪು ಮಸಿ ನಮ್ಮ ದೇಶದ ಚುನಾವಣೆಗೆ ಅಷ್ಟೇ ಅಲ್ಲ, ಮಲೇಶಿಯಾ, ಕಾಂಬೋಡಿಯಾ ಸೇರಿದಂತೆ 25 ದೇಶದ ಚುನಾವಣೆಗೂ ಇಲ್ಲಿಂದಲೇ ಮಸಿಯನ್ನು ಕಳುಹಿಸಲಾಗುತ್ತದೆ. ಇದು ಮೈಸೂರಿಗೆ, ಅರಗು ಕಾರ್ಖಾನೆಗೆ ಮತ್ತೊಂದು ಗರಿಮೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!