ಇಂದು ಆರ್‌ಸಿಬಿ-ಮುಂಬೈ ಇಂಡಿಯನ್ಸ್ ಹೈ ವೋಲ್ಟೇಜ್ ಪಂದ್ಯ, ಗೆಲುವು ಅನಿವಾರ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಆವೃತ್ತಿಯ ಮಹತ್ವದ ಪಂದ್ಯ ನಡೆಯಲಿದೆ. ರೋಹಿತ್ ಶರ್ಮಾ ಕ್ಯಾಪ್ಟನ್ಸಿಯ ಮುಂಬೈ ಇಂಡಿಯನ್ಸ್ ಹಾಗೂ ಫಾಫ್ ಡುಪ್ಲೆಸಿಸ್ ಕ್ಯಾಪ್ಟನ್ಸಿಯ ಆರ್‌ಸಿಬಿ ತಂಡ ಮುಖಾಮುಖಿಯಾಗಲಿವೆ.

MI vs RCB, IPL 2023: ಐಪಿಎಲ್​ನಲ್ಲಿಂದು ಆರ್​ಸಿಬಿ ಪಂದ್ಯ: ಫಾಫ್ ಪಡೆಗೆ ಮುಂಬೈ ಇಂಡಿಯನ್ಸ್ ಸವಾಲುಎರಡೂ ತಂಡಗಳು ಈವರೆಗೂ 10 ಪಂದ್ಯಗಳನ್ನು ಆಡಿದ್ದು, ಐದು ಪದ್ಯದಲ್ಲಿ ಗೆಲುವು ಸಾಧಿಸಿವೆ. ಹಾಗಾಗಿ ಈ ಪಂದ್ಯ ಎರಡೂ ತಂಡಕ್ಕೂ ಬಹುಮುಖ್ಯವಾಗಿದೆ.

ಏಕೆಂದರೆ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್​ಸಿಬಿ ತಂಡವು ಪಾಯಿಂಟ್ಸ್​ ಟೇಬಲ್​ನಲ್ಲಿ ಟಾಪ್​-4 ಹಂತಕ್ಕೇರಬಹುದು. ಅಲ್ಲದೆ ಭರ್ಜರಿ ಜಯ ಸಾಧಿಸುವ ಮೂಲಕ ನೆಟ್​ ರನ್​ ರೇಟ್ (-0.209)​ ಅನ್ನು ಪ್ಲಸ್ ಮಾಡಿಕೊಳ್ಳಬಹುದು. ರನ್‌ರೇಟ್ ಆಧಾರದ ಮೇಲೆ ಆರ್‌ಸಿಬಿ ಆರನೇ ಸ್ಥಾನದಲ್ಲಿದ್ದರೆ, ಮುಂಬೈ ಎಂಟನೇ ಸ್ಥಾನದಲ್ಲಿದೆ. ಪಾಯಿಂಟ್ ಟೇಬಲ್‌ನಲ್ಲಿ ಮೇಲೇರಲು ಈ ಪಂದ್ಯ ಬಹುಮುಖ್ಯವಾಗಿದೆ. ಬ್ಯಾಟಿಂಗ್ ಸ್ನೇಹಿಯಾಗಿರುವ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ಮತ್ತೊಂದು ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆಯಿದೆ. ಈ ಪಂದ್ಯಕ್ಕಾಗಿ ಫ್ಯಾನ್ಸ್ ಕಾದು ಕುಳಿತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!