ಶೇ.25ರಷ್ಟು ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ 2ನೇ ತರಗತಿ ಪಠ್ಯ ಓದೋಕೆ ಬರ‍್ತಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಶೇ.25ರಷ್ಟು ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಎರಡನೇ ತರಗತಿ ಪಠ್ಯ ಓದಲು ಬರುತ್ತಿಲ್ಲ!

ಹೌದು, 14-18 ರ ನಡು ವಯಸ್ಸಿನ ಶೇ.25ರಷ್ಟು ಮಕ್ಕಳಿಗೆ ಎರಡನೇ ತರಗತಿ ಪಠ್ಯವನ್ನು ನಿರರ್ಗಳವಾಗಿ ಓದಲು ಸಾಧ್ಯವಾಗುತ್ತಿಲ್ಲ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

ವಾರ್ಷಿಕ ಶಿಕ್ಷಣ ಸ್ಥಿತಿ ವರದಿ ವರದಿ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ಯಾವ ಭಾಷೆಯನ್ನು ಹೇಗೆ ಓದುತ್ತಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂಗ್ಲಿಷ್‌ನ್ನು ಶೇ,42ರಷ್ಟು ವಿದ್ಯಾರ್ಥಿಗಳು ಸರಳವಾಗಿ ಓದಲು ಕಷ್ಟಪಡುತ್ತಿದ್ದಾರೆ.

ಗಣಿತ ವಿಷಯದಲ್ಲಿ 14-18 ವರ್ಷದ ವಿದ್ಯಾರ್ಥಿಗಳಲ್ಲಿ ಶೇ. 43ರಷ್ಟು ಮಂದಿಗೆ ಮೂರನೇ ಹಾಗೂ ನಾಲ್ಕನೇ ತರಗತಿಯ ವಿದ್ಯಾರ್ಥಿಗಳಲ್ಲಿ ಇರುವಷ್ಟು ಕೌಶಲವಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!