Tuesday, March 28, 2023

Latest Posts

SHOCKING| 26 ವರ್ಷದ ಯುವಕನ ಹೊಟ್ಟೆಯಲ್ಲಿ 56 ಬ್ಲೇಡ್‌ಗಳು: ಬೆಚ್ಚಿಬಿದ್ದ ವೈದ್ಯರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಹೊಟ್ಟೆಯಲ್ಲಿ ಬರೀ ಆಹಾರ ಮಾತ್ರವಲ್ಲ, ಜನ ಈಗೀಗ ಸ್ಪೂನ್‌, ವೈರ್‌, ಮೊಳೆ ಇಂಥದ್ದೆಲ್ಲಾ ಕಾಣಸಿಗುತ್ತಿವೆ. ಹೊಸದಾಗಿ ರಾಜಸ್ಥಾನದ ಯುವಕನೊಬ್ಬ ಬ್ಲೇಡ್ ಗಳನ್ನು ನುಂಗಿದ್ದಾನೆ. ಏಕಕಾಲಕ್ಕೆ 56 ಬ್ಲೇಡ್ ಗಳನ್ನು ನುಂಗಿದ್ದು, ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ರಾಜಸ್ಥಾನದ ಜಲೋರ್ ಜಿಲ್ಲೆಯ ಯಶ್ ಪಾಲ್ ಎಂಬ 26 ವರ್ಷದ ಯುವಕ 56 ಬ್ಲೇಡ್‌ಗಳಿದ್ದ ಪ್ಯಾಕೆಟ್ ಅನ್ನು ನುಂಗಿದ್ದಾನೆ. ರಕ್ತ ವಾಂತಿ ಮಾಡಿದ ಯಶ್‌ನನ್ನು ಸ್ನೇಹಿತರು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಆತನ ಹೊಟ್ಟೆಯಲ್ಲಿ ಬ್ಲೇಡ್‌ಗಳಿರುವುದು ಪತ್ತೆಯಾಗಿದೆ.

ಯಶ್ ಪಾಲ್ ಖಾಸಗಿ ಕಂಪನಿಯೊಂದರಲ್ಲಿ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದಾರೆ. ರೂಮ್‌ನಲ್ಲಿ ಒಬ್ಬನೇ ಇದ್ದ ವೇಳೆ ವಾಂತಿ ಮಾಡಿಕೊಳ್ಳುತ್ತಿದ್ದರು. ಎಲ್ಲವೂ ರಕ್ತ, ಅದನ್ನು ನೋಡಿ ಯಶ್ ಗೊಂದಲಕ್ಕೊಳಗಾದರು. ತಕ್ಷಣ ಸ್ನೇಹಿತರಿಗೆ ಅವರು ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಕೊಠಡಿಗೆ ಬಂದ ಸ್ನೇಹಿತರು ಯಶ್ ಅವರನ್ನು ಸಂಚೋರ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಪರಿಸ್ಥಿತಿಯನ್ನು ತಿಳಿದ ವೈದ್ಯರು ಎಕ್ಸ್-ರೇ ತೆಗೆದಿದ್ದು, ಹೊಟ್ಟೆಯಲ್ಲಿ ಲೋಹದ ವಸ್ತುಗಳು ಪತ್ತೆಯಾಗಿದ್ದರಿಂದ, ವೈದ್ಯರು ಸೋನೋಗ್ರಫಿ ಮತ್ತು ಎಂಡೋಸ್ಕೋಪಿ ಮಾಡಿದರು. ಇದರಿಂದ ಯಶ್ ಹೊಟ್ಟೆಯಲ್ಲಿ ಬ್ಲೇಡ್‌ಗಳಿರುವುದು ದೃಢಪಟ್ಟಿದೆ. ಅಪಾಯವಾಗದಂತೆ ಕೂಡಲೇ ಕಾರ್ಯಾಚರಣೆ ನಡೆಸಬೇಕು ಎಂದು ತಾಕೀತು ಮಾಡಿದರು.

ತಕ್ಷಣ ಆಪರೇಷನ್ ಗೆ ಒಪ್ಪಿಗೆ ಸೂಚಿಸಿ ಶಸ್ತ್ರ ಚಿಕಿತ್ಸೆ ನಡೆಸಿ ಯಶ್ ಪಾಲ್ ಹೊಟ್ಟೆಯಿಂದ 56 ಬ್ಲೇಡ್ ತುಂಡುಗಳನ್ನು ಹೊರತೆಗೆದಿದ್ದಾರೆ. ಯಶ್ ಅವರ ಆರೋಗ್ಯ ಈಗ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದು, ಬ್ಲೇಡ್‌ನಲ್ಲಿದ್ದ ಕವರ್‌ನೊಂದಿಗೆ ಬ್ಲೇಡ್‌ಗಳನ್ನು ನುಂಗಿದ್ದರಿಂದ ಅವರಿಗೆ ಯಾವುದೇ ನೋವು ಕಾಣಿಸಿಕೊಂಡಿಲ್ಲ. ಬ್ಲೇಡ್‌ಗಳ ಪ್ಯಾಕೆಟ್ ಹೊಟ್ಟೆಯನ್ನು ತಲುಪಿದ ನಂತರ, ಮೇಲಿನ ಪ್ಯಾಕೆಟ್ ಕವರ್ ಜೀರ್ಣವಾಗುತ್ತದೆ. ಕಬ್ಬಿಣದ ಬ್ಲೇಡ್‌ಗಳು ತಮ್ಮ ಕೆಲಸ ಶುರು ಮಾಡುತ್ತಿದ್ದಂತೆ ಯಶ್ ರಕ್ತ ವಾಂತಿ ಮಾಡಿದರು ಹೇಳಿದರು. ಈತ ಬ್ಲೇಡ್‌ಗಳನ್ನು ಯಾಕೆ ನುಂಗಿದ ಎಂಬುದೇ ನಿಗೂಢ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!