Tuesday, March 28, 2023

Latest Posts

2 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ತಲುಪಿದೆ ಸಗಟು ಮಾರಾಟ ಹಣದುಬ್ಬರ: ಫೆಬ್ರವರಿಯಲ್ಲಿ 3.85 ಶೇಕಡಾಗೆ ಇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ಎರಡು ವರ್ಷಗಳಲ್ಲೇ ಅತ್ಯಂತ ಕಡಿಮೆ ಸಗಟು ಮಾರಾಟ ಹಣದುಬ್ಬರ ಫೆಬ್ರವರಿಯಲ್ಲಿ ದಾಖಲಾಗಿದೆ. ಮಂಗಳವಾರ ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಫೆಬ್ರವರಿ 2023 ರಲ್ಲಿ ಭಾರತದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು 24 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದ್ದು 3.85ಶೇಕಡಾಗೆ ತಲುಪಿದೆ.

2021ರ ಜನವರಿ ತಿಂಗಳ ನಂತರ ಇದು ಅತ್ಯಂತ ಕಡಿಮೆ ಮಟ್ಟದ ಸಗಟು ಮಾರಾಟ ಹಣದುಬ್ಬರ ದರವಾಗಿದ್ದು 2023ರ ಜನವರಿ ತಿಂಗಳಲ್ಲಿ 4.73 ಶೇಕಡಾದಷ್ಟು ಸಗಟು ಮಾರಾಟ ಹಣದುಬ್ಬರ(WPI) ದಾಖಲಾಗಿತ್ತು.

ಫೆಬ್ರವರಿಯಲ್ಲಿ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ, ಆಹಾರೇತರ ವಸ್ತುಗಳ ಆಹಾರ ಉತ್ಪನ್ನಗಳ ಬೆಲೆಗಳಲ್ಲಿನ ಇಳಿಕೆಯಿಂದಾಗಿ ಕುಸಿದಿದ್ದು ಖನಿಜಗಳು, ಕಂಪ್ಯೂಟರ್‌ಗಳು, ಎಲೆಕ್ಟ್ರಾನಿಕ್ ಮತ್ತು ಆಪ್ಟಿಕಲ್ ಉತ್ಪನ್ನಗಳು, ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳು, ವಿದ್ಯುತ್ ಉಪಕರಣಗಳು ಮತ್ತು ಮೋಟಾರು ವಾಹನಗಳ ಬೆಲೆಗಳೂ ಕೂಡ ಕಡಿಮೆಯಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!