ಅಂಡಮಾನ್-ನಿಕೋಬಾರ್ ದ್ವೀಪದ ಬಳಿ ಬರೋಬ್ಬರಿ 25,000 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಭಾರತೀಯ ಕೋಸ್ಟ್ ಗಾರ್ಡ್ ಅಂಡಮಾನ್ ಜಲಪ್ರದೇಶದಲ್ಲಿ ಮೀನುಗಾರಿಕಾ ದೋಣಿಯಿಂದ ಸುಮಾರು 5500 ಕೆಜಿ (ಸುಮಾರು 5 ಟನ್) ತೂಕದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇದರ ಬೆಲೆ 25000 ಕೋಟಿ ರೂ. ಆಗಿದೆ. ಈ ಸರಕು ಎಲ್ಲಿಂದ ಬರುತ್ತಿತ್ತು ಮತ್ತು ಯಾರಿಗೆ ಮತ್ತು ಎಲ್ಲಿಗೆ ಸರಬರಾಜು ಮಾಡಬೇಕಿತ್ತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ವಶಪಡಿಸಿಕೊಂಡ ದೊಡ್ಡ ಪ್ರಮಾಣದ ಮಾದಕ ದ್ರವ್ಯವು ಸರ್ಕಾರದ ಬದ್ಧತೆ ಮತ್ತು ಅದರ ಏಜೆನ್ಸಿಗಳ ನಡುವಿನ ಸಮನ್ವಯಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.

ಎರಡು ಕಿಲೋ ತೂಕದ ಡ್ರಗ್ಸ್‌ನ ಮೂರು ಸಾವಿರ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದು, ಕೋಸ್ಟ್‌ಗಾರ್ಡ್‌ನ ಡೋರ್ನಿಯರ್ ವಿಮಾನವು ಅನುಮಾನಾಸ್ಪದ ದೋಣಿಯನ್ನು ಗುರುತಿಸಿತು ಮತ್ತು ತಕ್ಷಣ ಹತ್ತಿರದ ಕಮಾಂಡ್‌ಗೆ ತಿಳಿಸಿತು. ಅದರ ಹಿನ್ನೆಲೆಯಲ್ಲಿ ಗಸ್ತು ಹಡಗುಗಳು ತಕ್ಷಣವೇ ಧಾವಿಸಿವೆ. ಹಡಗನ್ನು ತಕ್ಷಣವೇ ಹತ್ತಿರದ ದ್ವೀಪಕ್ಕೆ ಎಳೆಯಲಾಯಿತು. ಇದರಲ್ಲಿ ಆರು ಮಂದಿ ಮ್ಯಾನ್ಮಾರ್ ಪ್ರಜೆಗಳನ್ನು ಬಂಧಿಸಲಾಗಿದೆ. ವಶಪಡಿಸಿಕೊಂಡ ಡ್ರಗ್ಸ್ ಮೆಥಾಂಫೆಟಮೈನ್ ಎಂದು ನಂಬಲಾಗಿದೆ. ಜಂಟಿ ವಿಚಾರಣೆಗಾಗಿ ಅಂಡಮಾನ್ ನಿಕೋಬಾರ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸಾಗರ್​ಮಂಥನ್-4 ಹೆಸರಿನ ಅಭಿಯಾನವು ಗುಪ್ತಚರ ಸಂಸ್ಥೆಗಳ ಸುಳಿವು ಆಧರಿಸಿದೆ ಎಂದು ಹೇಳಿದೆ. ಕರಾವಳಿ ಕಾವಲು ಪಡೆ ಕಡಲಾಚೆಯ ಗಸ್ತು ನೌಕೆಗಳನ್ನು ಬಳಸಿ ಹಡಗನ್ನು ಗುರುತಿಸಿ ತಡೆದಿದೆ. ಎನ್‌ಸಿಬಿ, ನೌಕಾಪಡೆ ಮತ್ತು ಗುಜರಾತ್ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ದಳ ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!