ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಚಳಿ ಹೆಚ್ಚಾಗುತ್ತಿದ್ದು, ನಗರದ ತಾಪಮಾನ 12 ಡಿಗ್ರಿಗೆ ಕುಸಿಯುವ ಸಾಧ್ಯತೆಯಿದೆ.
ದಿನಗಳೆದಂತೆ ಚಳಿ ಜಾಸ್ತಿಯಾಗುತ್ತಿದ್ದು, ಸಂಜೆಯಿಂದಲೇ ಚಳಿ ಪ್ರಾರಂಭವಾಗುತ್ತಿದೆ. ಬೆಳಗ್ಗೆ ಗಂಟೆ ಏಳಾದರೂ ಇನ್ನೂ ಐದು ಗಂಟೆಯೆನಿಸುವ ವೆದರ್ ಇದಾಗಿರಲಿದೆ. ಸ್ವೆಟರ್ ಇಲ್ಲದೆ ಇಡೀ ದಿನ ಇರುವುದು ಕಷ್ಟವಾಗಿದೆ.
ಈ ಬಾರಿ ರಾಜ್ಯಕ್ಕೆ ಮಾಗಿ ಚಳಿ ಬೇಗ ಆಗಮಿಸಿದ್ದು, ಇದರ ಪರಿಣಾಮ ಚಳಿ ಜೊತೆಗೆ ಮಧ್ಯರಾತ್ರಿ ಇಬ್ಬನಿ ಕೂಡ ಶುರುವಾಗಿದೆ. ಇನ್ನಷ್ಟೂ ಚಳಿಯ ಪ್ರಮಾಣ ಹೆಚ್ಚಾಗಲಿದ್ದು, ಬೆಂಗಳೂರು ತಾಪಮಾನ 12 ಡಿಗ್ರಿಗೆ ಇಳಿಯುವ ಸಾಧ್ಯತೆ ಇದೆ. ಈಗಾಗಲೇ ಚಳಿ ಹೆಚ್ಚಿದ್ದು, ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಚಳಿ ಜಾಸ್ತಿ ಆಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಲಾ ನಿನೊ ಸ್ಥಿತಿಯಿಂದಾಗಿ ಈ ಬಾರಿ ಚಳಿ ಪ್ರಮಾಣ ತೀವ್ರಗೊಂಡಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗುವ ಮೂನ್ಸುಚನೆಯಿದ್ದು, ಈ ರೀತಿ ಕಡಿಮೆಯಾಗುವುದನ್ನು ಲಾ ನಿನೋ ಎಂದು ಕರೆಯುತ್ತಾರೆ. ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿರುವ ಕಾರಣ ಚಳಿ ಹೆಚ್ಚಾಗಿದೆ.