ಹೊಸದಿಂಗತ ಡಿಜಿಟಲ್ ಡೆಸ್ಕ್:
ಬಾಗಲಕೋಟೆಯ ಮರಾಠ ಸಮಾಜದ ವತಿಯಿಂದ ಮುಚಖಂಡಿ ಕ್ರಾಸ್ ನ ಪಂಚಮುಖಿ ಆಂಜನೇಯ ದೇವಸ್ಥಾನಕ್ಕೆ 25,000/ರೂ ದೇಣಿಗೆ ಸಲ್ಲಿಸಿದ್ದಾರೆ.
ಈ ಮರಾಠ ಸಮಾಜದ ಅಧ್ಯಕ್ಷರಾದ ದಯಾನಂದ ಶಿಂಧೆ, ಮಾರುತಿ ಶಿಂಧೆ, ಅಶೋಕ ಸಾಳುಂಕೆ, ಸಂಜು ವಾಡಕರ, ಭಿಮಸಿ ಮೋರೆ, ಮಾರುತಿ ನಲವಾಡೆ, ಪಾಂಡು ಜಾಧವ, ದೇವಸ್ಥಾನ ಸಮಿತಿ ಅಧ್ಯಕ್ಷರು ಬಸವರಾಜ ಕಟಗೇರಿ ಸ್ವೀಕರಿಸಿ ಧನ್ಯವಾದ ಸಲ್ಲಿಸಿದರು.
ಸ್ವಾಗತಸಮಿತಿ ಅಧ್ಯಕ್ಷರು ರವಿ ಕುಮುಟಗಿ, ವಿಜಯ ಸುಲಾಖೆ, ಅರುಣ ಲೊಕಾಪೂರ, ರಾಜು ಗೌಳಿ, ಪುನೀತ್ ಅರಳಿ ಹಾಗೂ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.