ಬಸವರಾಜ ಮತ್ತಿಮಡು ತೆರಳುತ್ತಿದ್ದ ವಾಹನ ಅಪಘಾತ: ಮೂವರಿಗೆ ಸಣ್ಣಪುಟ್ಟ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ಶಾಸಕ, ರಾಜ್ಯ ಬಿಜೆಪಿ ಕಾರ್ಯದರ್ಶಿ ಬಸವರಾಜ ಮತ್ತಿಮಡು ತೆರಳುತ್ತಿದ್ದ ವಾಹನ ಅಪಘಾತಕ್ಕೀಡಾಗಿದ್ದು, ವಾಹನದಲ್ಲಿದ್ದ ಶಾಸಕರ ಸಹಿತ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಈ ಘಟನೆ ಭಾನುವಾರ ಕಲಬುರಗಿ ತಾಲೂಕಿನ ಪಾಳಾದಿಂದ ಶಹಾಬಾದ್ ಕಡೆಗೆ ತರಳುತ್ತಿದ್ದ ಸಂದರ್ಭ ನಡೆದಿದೆ. ಶಾಸಕರು ಭಾನುವಾರ ಬೆಳಿಗ್ಗೆ ತಮ್ಮ ಮನೆಯಲ್ಲಿ ನಡೆಸುವ ದೈನಂದಿನ ಜನಸ್ಪಂದನ ಕಾರ್ಯಕ್ರಮ ಮುಗಿಸಿ, ಕಲಬುರಗಿ ತಾಲೂಕಿನ ಪಾಳಾದಿಂದ ಶಹಾಬಾದ್ ನತ್ತ ಹೊರಟಿದ್ದರು.

ಈ ಸಂದರ್ಭ ವಾಹನ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಒಳಗಾಗಿದೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೊಳಪಡಿಸಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!